ಉಡುಪಿಯ ಸಾರಿಗೆ ನೌಕರರ ಸಂಘನೆಯ ಗೌರವ ಅಧ್ಯಕ್ಷರಾಗಿ ಸಾಮಾಜಿಕ ಜೀವನಕ್ಕೆ ತೊಡಗಿಸಿದ ಒಬ್ಬ ವಿದ್ಯಾವಂತ ಯುವಕ ದೇಶದ ಅತ್ಯಂತ ಹಳೆಯ ರಾಷ್ಟ್ರೀಯ ಪಕ್ಷದ ನಿರ್ಣಾಯಕ ಸ್ಥಾನದಲ್ಲಿ ಪದೊನ್ನತಿಯನ್ನು ಪಡೆದ ನಾಯಕರಾಗಿದ್ದರು. ಇವರು ಕರ್ನಾಟಕ ರಾಜ್ಯ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ 1989ರ ಸಂದರ್ಬದಲ್ಲಿ ಎರಡು ಕ್ಷೇತ್ರದ ಚುನಾವಣೆ ಬಂದಿತ್ತು ಆ ಸಂದರ್ಭದಲ್ಲಿ ನಾನೂ ಅವರಿಗೆ ವಾಹನ ಸೌಲಭ್ಯ ಒದಗಿಸಿದ್ದೆ.
ಬೆಂಗಳೂರು ಮಂಗಳೂರು ರಸ್ತೆಯಲ್ಲಿ ಮಳೆಗಾಲದಲ್ಲಿ ರಸ್ತೆ ಹಾಳಗೂವುದನ್ನು ತಡೆಯಲು ಅವರು ಕೇಂದ್ರದಿಂದ ಹೊಸ ಯೋಜನೆಯನ್ನು ತಂದ್ದಿದರು, ಮಾತ್ರವಲ್ಲದೆ ಶೀರಾಡಿ ಗಾಟ್ ರಸ್ತೆಗೆ ಜಪಾನ್‌ನ ಇಂಜಿನಿಯರಿಂಗ್ ಸಂಸ್ಥೆಯ Jaiko ಮೂಲಕ ಸುರಂಗ ಮಾರ್ಗ ನಿರ್ಮಾಣದ ಯೋಜನೆಗೆ ಪ್ರಥಮದಲ್ಲಿ ತೊಡಗಿದ ದಕ್ಷಿಣಕನ್ನಡ ಸಹ ಹೃದಯಿ ರಾಜಕೀಯದ ಹಿರಿಯ ನಾಯಕರು ಕೇಂದ್ರ ಸಚಿವರನ್ನು ಕರ್ನಾಟಕ ಕಳಕೊಂಡಿದೆ.
ಸಾರಿಗೆ ಸಂಬಂಧಿಸಿದ ಯಾವೂದೆ ಪತ್ರಗಳಿಗೆ/ ಮನವಿಗಳಿಗೆ ಪ್ರತಿಕ್ರಿಯಿಸುವ ಸ್ವಭಾವ ಅವರದಾಗಿತ್ತು.
ಅವರ ಅತ್ಮಕ್ಕೆ ಭಗವಂತನು ಸದ್ಗತಿಯನ್ನು ಕೊಡಲಿ. ಹಾಗೂ ಇಂದಿನ ಸಾರ್ವಜನಿಕ ರಂಗದಲ್ಲಿ ತೊಡಗಿಸಿ ಕೊಂಡಿರುವ ಜನನಾಯಕರು ಅವರ ಹಾದಿಯಲ್ಲಿ ನಡೆಯಲಿ.