ನಗರದಲ್ಲಿ ಜಾಲಿ ರೈಡ್ ಹಾವಳಿ ಹೆಚ್ಚುತ್ತಿದ್ದು, ಶುಕ್ರವಾರ ರಾತ್ರಿ ಯುವಕ ಹಾಗೂ ಯುವತಿಯರು ಮರ್ಸಿಡೀಸ್ ಬೆಂಝ್ ಕಾರಿನಲ್ಲಿ ರಾಕ್ ಮ್ಯೂಸಿಕ್ ಹಾಕಿಕೊಂಡು ಜಾಲಿ ರೈಡ್ ಮಾಡುತ್ತಿದ್ದ ಐಷಾರಾಮಿ ಕಾರೊಂದನ್ನು ಸದಾಶಿವನಗರ ಸಂಚಾರ ಠಾಣೆ ಪೆÇಲೀಸರು ವಶಕ್ಕೆ ಪಡೆದಿದ್ದಾರೆ.
ಸದಾಶಿವನಗರದ ಯುವಕರು ತಡರಾತ್ರಿ ಕಾರಿನ ಮೇಲಿನ ರೋಪ್ ತೆಗೆದು ಡ್ಯಾನ್ಸ್ ಮಾಡುತ್ತಾ ಪೆÇಲೀಸರ ಎದುರಿಗೆ ಕೂಗಾಡುತ್ತಾ ಅತಿವೇಗವಾಗಿ ಕಾರು ಚಲಾಯಿಸುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದು ಎಲ್ಲೆಡೆ ವೈರಲ್ ಆಗುತ್ತಿದೆ. ಸ್ಯಾಂಕಿ ಟ್ಯಾಂಕ್ ಪಕ್ಕದ ರಸ್ತೆಯಲ್ಲಿ ಘಟನೆ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ತುರ್ತು ಅಗತ್ಯ ಸೇವೆ ಫಲಕ:
ಯುವಕರು ವಿದ್ಯುತ್ ಕಂಪನಿಯೊಂದರ ಸಿಬ್ಬಂದಿಗಳೆಂದು ಹೇಳಿಕೊಳ್ಳುವುದರ ಜತೆಗೆ ತಮ್ಮ ಕಾರಿನ ಮುಂದೆ ತುರ್ತು ಅಗತ್ಯ ಸೇವೆ ಫಲಕ ಹಾಕಿಕೊಂಡು ಜಾಲಿ ರೈಡ್ ಮಾಡಿದ್ದಾರೆ. ಕಾರಿನ ಹಿಂಭಾಗ ಸೋಹಮ್ ರಿನವೆಬಲ್ ಎನರ್ಜಿ ಪ್ರೈ.ಲಿ. ನಾಮಫಲಕ ಹಾಕಿಕೊಂಡು ಸದಾಶಿವನಗರದ ಹಲವು ಭಾಗಗಳಲ್ಲಿ ಜಾಲಿ ರೈಡಿ ಮಾಡಿದ್ದಾರೆ. ಹೀಗಾಗಿ, ನೈಟ್ ಕಫ್ರ್ಯೂ ಉಲ್ಲಂಘಿಸಿ ಸಂಚಾರ ಮಾಡಿರುವ ಕಾರಣ ಎನ್‍ಡಿಎಂಎ ಕಾಯಿದೆಯಡಿ ಪ್ರಕರಣ ದಾಖಲಿಸಿಕೊಂಡು ಕಾರು ಜಪ್ತಿ ಮಾಡಲಾಗಿದೆ ಎಂದು ಪೆÇಲೀಸರು ತಿಳಿಸಿದರು.
ಈ ಹಿಂದೆ ಇದೇ ರೀತಿ ಹೊಸೂರು ಶಾಸಕ ಪ್ರಕಾಶ್ ಅವರ ಪುತ್ರ ಕರುಣಾಕರ ಹಾಗೂ ಆತನ ಪ್ರೇಯಸಿ ಬಿಂದು ಸೇರಿದಂತೆ ಆರು ಮಂದಿ ಆಡಿ ಕ್ಯೂ-3 ಕಾರಿನಲ್ಲಿ ಮಧ್ಯರಾತ್ರಿ 2 ಗಂಟೆ ಸಮಯದಲ್ಲಿ ಕೋರಮಂಗಲದಲ್ಲಿ ಜಾಲಿ ರೈಡ್ ಮಾಡಿದ್ದರು. ಈ ವೇಳೆ ಮಂಗಳ ಕಲ್ಯಾಣ ಮಂಟಪದ ಬಳಿ ಕಾರು ಅಪಘಾತಕ್ಕೀಡಾಗಿ ಏಳು ಮಂದಿಯೂ ಸಾವನ್ನಪ್ಪಿದ್ದರು. ಇದೀಗ ಮತ್ತೆ ಸದಾಶಿವನಗರದಲ್ಲಿ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶ ಉಂಟು ಮಾಡಿದೆ. ಪೆÇಲೀಸರ ಕರ್ತವ್ಯ ನಿರ್ವಹಣೆ ಬಗ್ಗೆಯೂ ಸಾರ್ವಜನಿಕ ವಲಯ ಸಂಶಯ ವ್ಯಕ್ತಪಡಿಸಿದೆ.