40 ಪ್ರಕರಣದಲ್ಲಿ ಬೇಕಾಗಿದ್ದ ಆರೋಪಿ ಅರೆಸ್ಟ್
ಬೆಂಗಳೂರಿನಲ್ಲಿ ಕಳ್ಳರ ಹಾವಳಿ ಹೆಚ್ಚಾಗಿದ್ದು, ಪೊಲೀಸರು ನಿದ್ದೆಗೆಟ್ಟು ಕಳ್ಳರನ್ನು ಖೆಡ್ಡಾಗೆ ಕೆಡವಲು ತಯಾರಿ ನಡೆಸುತ್ತಲೇ ಇರುತ್ತಾರೆ. ಇದೀಗ 40 ಪ್ರಕರಣಗಳಲ್ಲಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಓಡಾಡುತ್ತಿದ್ದ ಖತರ್ನಾಕ್ ಕಳ್ಳರನ್ನು ಖಾಕಿ ಬಲೆಗೆ ಬೀಳಿಸಿದ್ದಾರೆ. ಜಾನ್ ಮೆಲ್ವಿನ್ ಬಂಧಿತ ಮನೆಗಳ್ಳನಾಗಿದ್ದಾನೆ. ಈತ ಜೈಲಿನಲ್ಲಿನ ಕೈದಿ ಜೊತೆ ಸೇರಿ ಮನೆಗಳ್ಳತನಕ್ಕೆ ಸ್ಕೆಚ್ ಹಾಕ್ತಿದ್ದ ಎಂಬ ಮಾಹಿತಿ ತನಿಖೆ ವೇಳೆ ತಿಳಿದು ಬಂದಿದೆ. ಬೆಂಗಳೂರಿನ ಜಯನಗರ ಪೊಲೀಸರು ಜಾನ್ ಮೆಲ್ವಿನ್ನನ್ನು ಬಂಧಿಸಿದ್ದು, ಬರೋಬ್ಬರಿ 800 ಗ್ರಾಂ ಚಿನ್ನಾಭರಣವನ್ನು ವಶಕ್ಕೆ ಪಡೆದಿದ್ದಾರೆ. ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿದ್ವು. ಇದೀಗ ಖದೀಮ ಅಂದರ್ ಆಗಿದ್ದು, ಈತನ ಜೊತೆ ಯಾರೆಲ್ಲ ಸೇರಿ ಕಳ್ಳತನ ನಡೆಸ್ತಿದ್ರು ಹಾಗೂ ಯಾವೆಲ್ಲ ಪ್ರಕರಣಗಳಲ್ಲಿ ಈತನ ಕೈವಾಡವಿದೆ ಎಂಬ ಮಾಹಿತಿ ತನಿಖೆ ನಂತರವಷ್ಟೇ ಬೆಳಕಿಗೆ ಬರೆಬೇಕಿದೆ.