ಕಲ್ಲು ತೂರಿದ ಯುವಕನಿಗೆ ಥಳಿತ..!

ಶನಿವಾರ, 20 ಆಗಸ್ಟ್ 2022 (18:59 IST)
ಸರಕಾರಿ ಬಸ್ ಗ್ಲಾಸ್ ಒಡೆದು ಪರಾರಿಯಾಗುತ್ತಿರುವ ಯುವಕನಿಗೆ ಬಸ್​​​​ ಚಾಲಕ ಮತ್ತು ಸಾರ್ವಜನಿಕರು ಗೂಸಾ ಕೊಟ್ಟ ಘಟನೆ ಧಾರವಾಡ ಶಿವಾಜಿ ಸರ್ಕಲ್​​​​ನಲ್ಲಿ ನಡೆದಿದೆ. ಹೋಗುವ ಬಸ್​​​​​ಗೆ ಹಿಂಬದಿಯಿಂದ ಯುವಕ ಕಲ್ಲು ತೂರಾಟ ಮಾಡಿದ್ದಾನೆ. ನಂತರ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಯುವಕನನ್ನ ಬೆನ್ನಟ್ಟಿದ ಸಾರ್ವಜನಿಕರು ಮತ್ತು ಬಸ್ ಚಾಲಕ ಮತ್ತು ನಿರ್ವಾಹಕರು ಸೇರಿ ಯುವಕನನ್ನ ಬೆನ್ನೆತ್ತಿ ಹಿಡಿದು ಗೂಸಾ ನೀಡಿದ್ದಾರೆ. KSRTC ಇಂಡಿಯಿಂದ ರಾಣೆಬೆನ್ನೂರಿಗೆ ಹೋಗುತ್ತಿದ್ದು. ಕಿಡಿಗೇಡಿ ಯುವಕ  ಬಸ್​​ಗೆ ಕಲ್ಲು ತೂರಾಟ ಮಾಡಿದ್ದಾನೆ.  ಉಪನಗರ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ