ಪ್ರಿಯಕರನ ಲವ್ ನಲ್ಲಿ ಬಿದ್ದ ಪತ್ನಿಯು ಪತಿಗೆ ಇಟ್ಟಳು ಮುಹೂರ್ತ
ತನ್ನ ಲವ್ವಿ ಡವ್ವಿಗೆ ಗಂಡನೇ ಅಡ್ಡ ಬರುತ್ತಾನೆ ಎಂದು ಭಾವಿಸಿದ ಪತ್ನಿಯೊಬ್ಬಳು ತನ್ನ ಗಂಡನನ್ನೆ ಕೊಂದ ಘಟನೆ ನಡೆದಿದೆ.
ಮದುವೆಯಾಗಿ ಎರಡು ಮಕ್ಕಳಿದ್ದರೂ ಆ ಪತ್ನಿ ಬೇರೆಯೊಬ್ಬನ ಯುವಕ ಪ್ರೀತಿಯಲ್ಲಿ ಬಿದ್ದಿದ್ದಳು. ಗಂಡನ ಕಣ್ಣು ತಪ್ಪಿಸಿ ಆಕೆ ಆತನೊಂದಿಗೆ ಕುಚು ಕುಚು ಮಾಡುತ್ತಿದ್ದಳು.
ಆದರೆ ತನ್ನ ಪ್ರಿಯಕರನೊಂದಿಗೆ ಓಡಿ ಹೋಗಲು ನಿರ್ಧರಿಸಿದಾಗ ಪತಿಗೆ ನೀಡೋ ಊಟದಲ್ಲಿ ವಿಷ ಹಾಕಿದ್ದಾಳೆ. ಆ ಬಳಿಕ ಹೆದರಿಕೆಯಿಂದ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ.
ಪಂಜಾಬ್ ನ ತರನ್ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಪತಿ ರಾಜಪ್ರೀತ್ ಕೊಲೆಯಾಗಿದ್ದಾನೆ. ಈತನ ಪತ್ನಿ ಸಿಮ್ರಾನ್ ಕೊಲೆ ಮಾಡಿದ ಆರೋಪಿಯಾಗಿದ್ದಾಳೆ. ಲವ್ಪ್ರೀತ್ ಸಿಂಗ್ ಎಂಬಾತನ ಜತೆಗೆ ಸಿಮ್ರಾನ್ ಸಂಬಂಧ ಇಟ್ಟುಕೊಂಡಿದ್ದಳು.