ಇಸ್ಲಾಂ ಧರ್ಮ ಪಾಲಿಸುವಂತೆ ಕಿರುಕುಳ ನೀಡುತ್ತಿದ್ದ ಪತಿಯ ವಿರುದ್ಧ ಪತ್ನಿಯಿಂದ ಕೇಸ್

ಬುಧವಾರ, 25 ಮೇ 2016 (16:44 IST)
ಕಡ್ಡಾಯವಾಗಿ ಬುರ್ಕಾ ಧರಿಸಿ, ಇಸ್ಲಾಂ ಧರ್ಮ ಪಾಲಿಸುವಂತೆ ಕಿರುಕುಳ ನೀಡುತ್ತಿದ್ದ ಕ್ರೂರ ಪತಿಯ ವರ್ತನೆ ಖಂಡಿಸಿ ಪತ್ನಿಯೊಬ್ಬಳು ಪೊಲೀಸ್ ಠಾಣೆ ಮೊರೆ ಹೋದ ಘಟನೆ ಕೋಲಾರದಲ್ಲಿ ನಡೆದಿದೆ.
 
19 ವರ್ಷದ ಹಿಂದೆ ಸೂಫಿಯಾ ಎಂಬ ಮಹಿಳೆ ಇನಾಯತ್ ಉಲ್ಲಾ ಎಂಬ ವ್ಯಕ್ತಿಯನ್ನು ವಿವಾಹವಾಗಿದ್ದಳು. ಆದರೆ, ಪಾಪಿ ಪತಿರಾಯ ಇನಾಯತ್ ಉಲ್ಲಾ, ತನ್ನ ಪತ್ನಿ ಮತ್ತು ಮಗಳಿಗೆ ಹೊರಗಡೆ ಹೋಗುವಾಗ ಕಡ್ಡಾಯವಾಗಿ ಬುರ್ಕಾ ಜೊತೆಗೆ ಕೈಚೀಲ ಮತ್ತು ಸಾಕ್ಸ್ ಧರಿಸಲೇ ಬೇಕು. ಇಲ್ಲವಾದಲ್ಲಿ ಪತ್ನಿಯನ್ನು ಹಿಗ್ಗಾಮುಗ್ಗಾ ತಳಿಸಿ ಕಿರುಕುಳು ನೀಡುತ್ತಿದ್ದ ಎಂದು ಆರೋಪಿಸಿ ಪೊಲೀಸ್ ಠಾಣೆ ಮೋರೆ ಹೋಗಿದ್ದಾಳೆ.
 
ಇಷ್ಟಕ್ಕೆ ನಿಲ್ಲದ ಇನಾಯತ್ ಉಲ್ಲಾ ದಬ್ಬಾಳಿಕೆ, ಪತ್ನಿಗೆ ಗಂಡು ಮಗುವಿಗೆ ಜನ್ಮ ನೀಡಬೇಕು, ಮಕ್ಕಳಿಗೆ ಶಿಕ್ಷಣ ಕೊಡಿಸುವುದು ಬೇಡ ಎಂದು ಒತ್ತಡ ಹೇರುತ್ತಿದ್ದ ಎಂದು ಮಹಿಳೆ ಗಂಭೀರವಾಗಿ ಆರೋಪಿಸಿದ್ದಾಳೆ.
 
ಪತಿಯ ಕ್ರೂರ ವರ್ತನೆಗೆ ಬೇಸತ್ತ ಪತ್ನಿ ಸೂಫಿಯಾ, ಪೊಲೀಸ್‌ರ ಮೊರೆ ಹೋಗುತ್ತಿದ್ದಂತೆ ಆರೋಪಿ ಪತಿ ತಲೆ ಮರೆಸಿಕೊಂಡಿದ್ದಾನೆ. ಈ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದ್ದು, ಪೊಲೀಸರು ಆರೋಪಿ ಪತಿ ಇನಾಯತ್ ಉಲ್ಲಾ ಪತ್ತೆಗಾಗಿ ಶೋಧ ನಡೆಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ