ಪೆಟ್ರೋಲ್ ಬಂಕ್ ಸರದಿ ಸಾಲಿನಲ್ಲಿ ಬರೆದೇ ದರ್ಪ ತೋರಿ ಮಹಿಳೆಗೆ ನಿಂದನೆ

ಮಂಗಳವಾರ, 6 ಡಿಸೆಂಬರ್ 2022 (19:47 IST)
ಪೆಟ್ರೋಲ್ ಬಂಕ್ ಸರದಿ ಸಾಲಿನಲ್ಲಿ ಬರೆದೇ ಮಹಿಳೆಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದವನ ಮೇಲೆ  ಎಫ್ ಐ ಆರ್ ದಾಖಲಾಗಿದೆ.ಕಳೆದ ಡಿಸೆಂಬರ್ 1 ರಂದು ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯಲ್ಲಿ  ಘಟನೆ ನಡೆದಿದ್ದು,ಚಂದ್ರಪ್ಪ ಎಂಬುವವನಿಂದ ಸ್ವಾತಿ ಎಂಬ ಮಹಿಳೆಗೆ ನಿಂದನೆಯಾಗಿದೆ.ಡಿಸೆಂಬರ್ 1 ರಂದು ಮಧ್ಯಾಹ್ನ 1.30 ರ ಸುಮಾರಿಗೆ ಪೆಟ್ರೋಲ್ ಬಂಕ್ ತೆರಳಿದ್ದ ಸ್ವಾತಿ.ಈ ವೇಳೆ ಸರತಿ ಸಾಲಿನಲ್ಲಿ ಬರದೆ ಮುಂದೆ ನುಗ್ಗಿ ಪೆಟ್ರೋಲ್ ಹಾಕಿಸಲು ಚಂದ್ರಪ್ಪ ಮುಂದಾಗಿದ್ದ.ಇದನ್ನ ಪ್ರಶ್ನಿಸಿದ ಸ್ವಾತಿಗೆ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾನೆ.ಸ್ವಾತಿ ಮೇಲೆ ಹಲ್ಲೆಗೂ ಚಂದ್ರಪ್ಪ ಮುಂದಾಗಿದ್ದ .ವೈಟ್ ಫೀಲ್ಡ್ ಠಾಣಾ ವ್ಯಾಪ್ತಿಯ ಹಗದೂರು ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ನಲ್ಲಿ ಘಟನೆ ನಡೆದಿದೆ.ಘಟನೆ ಸಂಬಂಧ ಸಿಸಿಟಿವಿ ಸಮೇತ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದು ಮಹಿಳೆ, ಚಂದ್ರಪ್ಪನ ದರ್ಪ ಸಿಸಿಟಿವಿಯಲ್ಲಿ ಸೆರೆಯಾಗಿದೆ.ಇನ್ನೂ ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ