ಮೃತ ಮಹಿಳೆ ರಕ್ಷಿತಾ ಎಂದು ತಿಳಿದುಬಂದಿದೆ. ಕೆಎಸ್ಆರ್ ಟಿಸಿ ಚಾಲಕ ಕಂ ನಿರ್ವಾಹಕ ಶ್ರೀನಿವಾಸ್ನನ್ನು ವಿವಾಹವಾಗಿದ್ದ ರಕ್ಷಿತಾಳೊಂದಿಗೆ ಪತಿ ಕಲಹ ಆರಂಭಿಸಿ ತಾಳಿ ಕಿತ್ತು ಆಕೆಯನ್ನು ಮನೆಯಿಂದ ಹೊರ ಹಾಕಿದ್ದ ಎನ್ನಲಾಗಿದೆ. ಇದರಿಂದ ಮನನೊಂದ ರಕ್ಷಿತಾ ಗಂಡನ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.