ಆ ಕೆಲಸ ಮಾಡೋಕೆ ಹೋದ ಮಹಿಳೆ ಸಿಕ್ಕಿಬಿದ್ದಳು!

ಗುರುವಾರ, 4 ಜುಲೈ 2019 (17:08 IST)
ಮಾಡಬಾರದ ಕೆಲಸ ಮಾಡೋಕೆ ಮುಂದಾಗಿದ್ದ ಮಹಿಳೆಗೆ ಆಗಬಾರದ್ದು ಆಗಿ ಹೋಗಿದೆ.

ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಐವರನ್ನು ಪೊಲೀಸರು ಬಂಧಿಸಿರುವ ಘಟನೆ ನಡೆದಿದೆ.

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಕೊಳ್ಳಂಗಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಮಾರಾಟದಲ್ಲಿ ತೊಡಗಿದ್ದ ಐದು ಜನರನ್ನು ಬಂಧಿಸಲಾಗಿದ್ದು, ಬಂಧಿತರಿಂದ 23 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.

ಗಾಂಜಾ ಮಾರಾಟ ಮಾಡುವುದಕ್ಕಾಗಿ ಮಹಿಳೆಯೊಬ್ಬಳು ಭಾರೀ ಪ್ರಮಾಣದಲ್ಲಿ ಸ್ಕೆಚ್ ರೂಪಿಸಿದ್ದಳು ಎನ್ನಲಾಗಿದೆ. ಅರಕಲಗೂಡು ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಬಂಧಿತರಿಂದ 23 ಕೆಜಿ ಗಾಂಜಾ ಹಾಗೂ 3 ಸಾವಿರ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಂಧಿತರನ್ನು ಅಬ್ಬೂರು ಮಾಚಾಗೌಡನ ಹಳ್ಳಿಯ ಸಾದೀಕ್, ಅಬ್ದುಲ್ ಖಾದರ್, ಓರಿಸ್ಸಾ ಮೂಲದ ರೇಖಾ ಸುಷ್ಮಾ, ನಿಯಮ್ ಎಂದು ಗುರುತಿಸಲಾಗಿದೆ.


ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ