ಆಟಿಡೊಂಜಿ ದಿನ ಬಗೆ ಬಗೆ ಖಾದ್ಯ ತಿಂದು ತೇಗಿದ್ರು: ಈ ಹಬ್ಬದ ವಿಶೇಷತೆ ಗೊತ್ತಾ?

ಬುಧವಾರ, 18 ಜುಲೈ 2018 (18:35 IST)
ಆಟಿ, ತುಳುನಾಡಿನಲ್ಲಿ ವಿಶೇಷ ಸ್ಥಾನಮಾನ ಪಡೆದ ತಿಂಗಳು. ಎಲ್ಲಾ ಮಾಸಗಳ ಪೈಕಿ ವಿಭಿನ್ನ ಆಹಾರ ಶೈಲಿ, ಆಚಾರಗಳನ್ನು ಹೊಂದಿದೆ ಆಷಾಡ ಮಾಸ. ಕಾರಣ ಜೋರಾಗಿ ಮಳೆ ಸುರಿಯುವ ಮಾಸದಲ್ಲಿ ರೋಗ ರುಜಿನಗಳು ದೇಹವನ್ನು ಬಾಧಿಸುತ್ತವೆ. ಹೀಗಾಗಿ ಆಟಿ ತಿಂಗಳಲ್ಲಿ ಹಳ್ಳಿಗರ ಆಹಾರ ಪದ್ದತಿಯೂ ವಿಭಿನ್ನವಾಗಿರುತ್ತವೆ.  ಈ ಮಾಸದ ಅಂಗವಾಗಿ ಬಗೆ ಬಗೆ ಖಾದ್ಯಗಳನ್ನು ಮಾಡಿ ಮಹಿಳೆಯರು ಸವಿದರು.

 ಸಾಮಾನ್ಯವಾಗಿ ಆಷಾಡ ಮಾಸದಲ್ಲಿ ವಿವಿಧೆಡೆ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಆಟಿ ಕೂಟದಂತಹ ಕಾರ್ಯಕ್ರಮಗಳು ನಡೆಯುತ್ತದೆ. ಅಂತೆಯೇ ಉಡುಪಿಯಲ್ಲೂ ಆಟಿಡೊಂಜಿ ದಿನ ಮಹಿಳೆಯರ ಕೂಟ ಕಾರ್ಯಕ್ರಮ ನಡೆಯಿತು.
ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಬಟರ ಯಾನೆ ನಾಡವರ ಸಂಘ ಮತ್ತಿತರ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಉಡುಪಿಯ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಭವನದಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಉಡುಪಿ ಶಾಸಕ ರಘುಪತಿ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದ್ರು. ಸಮಾರಂಭದಲ್ಲಿ ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಉಡುಪಿ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟ ಅಧ್ಯಕ್ಷೆ ಶೀಲಾ ಕೆ. ಶೆಟ್ಟಿ ಮೊದಲಾದವರು ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಕಾರ್ಯಕ್ರಮದಲ್ಲಿ ಸೇರಿದ್ದವರೆಲ್ಲಾ ಆಟಿ ತಿನಿಸುಗಳ ಸವಿಯನ್ನು ಉಂಡರು. ಪತ್ರೋಡೆ, ಮೂಡೆ, ಇಡ್ಲಿ, ಹಲಸಿನ ಗಟ್ಟಿ, ಉಪ್ಪಿನ ಸೋಳೆ ಸುಕ್ಕ, ಪಾಯಸ ಹೀಗೆ ಆಟಿ ತಿಂಗಳ ಖಾದ್ಯಗಳನ್ನು ತಿಂದು ತೇಗಿದ್ರು



ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ