ಬಿಜೆಪಿ ಸಚಿವರಿಂದ ಮುಸ್ಲಿಂ ಮತ ಓಲೈಕೆ ಕಸರತ್ತು ನಡೀತಿದ್ಯಾ ಅನ್ನೋ ಚರ್ಚೆ ಶುರುವಾಗಿದೆ. ಮುಸ್ಲಿಮರ ಮನವೊಲಿಕೆಗೆ ಸಚಿವ ಎಂಟಿಬಿ ನಾಗರಾಜ್ ಮುಂದಾಗಿದ್ದಾರೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ಮುಸ್ಲಿಮರ ಮನವೊಲಿಕೆಗೆ ಸಚಿವ ಎಂಟಿಬಿ ಮತ್ತು ಪುತ್ರ ನಿತಿನ್ ಪುರುಷೋತ್ತಮ್ ಕವ್ವಾಲಿ ಕಾರ್ಯಕ್ರಮ ಆಯೋಜಿಸಿದ್ರು. ಹೊಸಕೋಟೆಯ ಚೆನ್ನಭೈರೇಗೌಡ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಸ್ಲಿಂ ಟೋಪಿ ಹಾಕಿಕೊಂಡು ಸಚಿವ ಎಂಟಿಬಿ ನಾಗರಾಜ್ ಭಾಗಿಯಾಗಿದ್ರು. ಅಷ್ಟೇ ಅಲ್ಲ ಉರ್ದುನಲ್ಲೇ ಭಾಷಣ ಆರಂಭಿಸಿದ ಸಚಿವ ಎಂಟಿಬಿ ನಾಗರಾಜ್, ಕೊನೆಯವರೆಗೂ ಮುಸ್ಲಿಂ ಟೋಪಿ ಹಾಕಿ ಕುಳಿತಿದ್ರು.