ವೃದ್ಧೆ ಮೇಲೆ ಅತ್ಯಾಚಾರವೆಸಗಿ ಯುವಕ !

ಮಂಗಳವಾರ, 6 ಡಿಸೆಂಬರ್ 2022 (12:07 IST)
ದಾವಣಗೆರೆ : ಗಂಡ ಹಾಗೂ ಮಕ್ಕಳಿಲ್ಲದೆ ಒಂಟಿಯಾಗಿ ಜೀವನ ನಡೆಸುತ್ತಿದ್ದ 80 ವರ್ಷದ ವೃದ್ಧೆಯ ಮೇಲೆ 30 ವರ್ಷದ ಯುವಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ಬೀರಗೊಂಡನಹಳ್ಳಿಯಲ್ಲಿ ನಡೆದಿದೆ.

ಆರೋಪಿ ಎಸ್.ರವಿ (30) ವೃದ್ಧೆಯ ಮೇಲೆ ಅತ್ಯಾಚಾರ ಮಾಡಿದ ನಂತರ ತಲೆಮರೆಸಿಕೊಂಡಿದ್ದಾನೆ. ಕಳೆದ ಶನಿವಾರ ಬೆಳಗ್ಗಿನ ಜಾವ ಒಂಟಿಯಾಗಿದ್ದ ವೃದ್ಧೆಯ ಮನೆಯೊಳಗೆ ನುಗ್ಗಿದ ಆರೋಪಿ ಆಕೆಯನ್ನು ಅಡುಗೆ ಕೋಣೆಗೆ ಎಳೆದೊಯ್ದ ಎಷ್ಟೇ ಕೂಗಿದರೂ ಬಿಡದೆ, ಅತ್ಯಾಚಾರ ಎಸಗಿದ್ದಾನೆ ಎಂದು ವೃದ್ಧೆಯು ದೂರಿನಲ್ಲಿ ವಿವರಿಸಿದ್ದಾರೆ. 

20 ವರ್ಷಗಳ ಹಿಂದೆ ವೃದ್ಧೆ ಪತಿ ತೀರಿಕೊಂಡಿದ್ದು, ಮಕ್ಕಳಿಲ್ಲದ್ದರಿಂದ ಒಂಟಿ ಜೀವನ ನಡೆಸುತ್ತಿದ್ದಾರೆ. ಕೂಲಿ ನಾಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದ ವೃದ್ಧೆ ಮೇಲೆ ಕಿರಾತಕ ಅತ್ಯಾಚಾರ ವೆಸಗಿದ್ದಾನೆ.
ಅತ್ಯಾಚಾರವಾದ ನಂತರ ವೃದ್ಧೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದ್ದು, ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ವೃದ್ಧೆ ದೂರು ದಾಖಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ