ಸಲೂನ್ ಗೆ ಹೋದ ಪಿಯುಸಿ ವಿದ್ಯಾರ್ಥಿ ಹಗಲಲ್ಲೇ ಹೆಣವಾದ
ಹೇರ್ ಕಟಿಂಗ್ ಮಾಡಿಸಿಕೊಳ್ಳೋಕೆ ಅಂತ ಹೋಗಿದ್ದ ಯುವಕನೊಬ್ಬ ಹಾಡುಹಗಲೇ ಭೀಕರವಾಗಿ ಕೊಲೆಗೀಡಾಗಿದ್ದಾನೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ಪಿಯು ಕಾಲೇಜ್ ನಲ್ಲಿ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿ ಕೊಲೆಯಾಗಿದ್ದಾನೆ.
ನಾಲ್ಕೈದು ಗುಂಪಿನ ಯುವಕರು ಬೊರಬಂಡಾ ಗ್ರಾಮದ ವಿದ್ಯಾರ್ಥಿ ಮೋಹನ್ ಪವಾರ್ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ. ಸ್ನೇಹಿತನೋರ್ವ ಮೋಹನ್ ಗೆ ಫೋನ್ ಮಾಡಿದ್ದಾನೆ. ನಂತರ ಮೋಹನ್ ಅಂಗಡಿಯಿಂದ ಹೊರಬಂದಾಗ ದುಷ್ಕರ್ಮಿಗಳು ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ.
ಗುರುಮಠಕಲ್ ಪಟ್ಟಣದ ಕೇಂದ್ರ ಬಸ್ ನಿಲ್ದಾಣದ ಹತ್ತಿರ ಈ ದುರ್ಘಟನೆ ಜರುಗಿದೆ. ಸ್ನೇಹಿತರಾದ ಥೈರಾನ್ ಹಾಗೂ ಮಹಿಪಾಲ ಅವರು ಕೊಲೆ ಮಾಡಿ ಪರಾರಿಯಾಗಿದ್ದಾರೆಂದು ಶಂಕಿಸಲಾಗಿದೆ.