ಹೆಬ್ಬಾಳದಲ್ಲಿ15 ಸಾವಿರ ನಕಲಿ ವೋಟರ್ಸ್ ಇದ್ದಾರೆ- ನಾರಾಯಣಸ್ವಾಮಿಯಿಂದ ಆರೋಪ
ಗುರುವಾರ, 18 ಏಪ್ರಿಲ್ 2019 (11:28 IST)
ಬೆಂಗಳೂರು : ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಮತದಾನ ನಡೆಯುತ್ತಿದ್ದು, ಈ ನಡುವೆ ವಿಧಾನ ಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ನಕಲಿ ವೋಟ್ ನ ಆರೋಪ ಮಾಡಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 15 ಸಾವಿರ ನಕಲಿ ವೋಟರ್ಸ್ ಇದ್ದಾರೆ. ಈ ನಕಲಿ ಹೆಬ್ಬಾಳದಲ್ಲಿಯೇ ಇದ್ದಾರೆ ಎಂದು ನಕಲಿ ವೋಟರ್ಸ್ ಗಳ ಹೆಸರನ್ನು ಪ್ರದರ್ಶಿಸಿದ್ದಾರೆ.
ಹಾಗೇ ಈ ಬಾರಿ ಬಿಬಿಎಂಪಿ ಸಾಕಷ್ಟು ಗೊಂದಲವನ್ನು ಸೃಷ್ಟಿಸಿದೆ ಎಂದು ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.