ಕಂತು ಮರುಪಾವತಿ ಮಾಡದೇ ಇರುವುದು, ಸಮರ್ಪಕವಾಗಿ ಪಾವತಿ ಮಾಡದೇ ಇರುವುದು ಸೇರಿದಂತೆ ನಾನಾ ಕಾರಣಗಳಿಗೆ ಸಾಲ ನೀಡುವ ಮೊಬೈಲ್ ಆಪ್ ಕಂಪನಿಗಳಿಗೆ ತೊಂದರೆ, ಕಿರುಕುಳ ಆಗುತ್ತಿರುವ ಬಗ್ಗೆ ಸಾವಿರಾರು ದೂರುಗಳು ಬಂದಿದ್ದು, ಇವುಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಆರ್ ಸಿಬಿ ನಿರ್ದೇಶಕ ಶಶಿಕಾಂತ್ ದಾಸ್ ಅವರು ತಿಳಿಸಿದ್ದಾರೆ.
ದೇಶಾದ್ಯಂತ ಒಟ್ಟಾರೆ 2562 ದೂರುಗಳು ದಾಖಲಾಗಿದ್ದು, ಮಹಾರಾಷ್ಟ್ರದಲ್ಲಿ 572 ಅತೀ ಹೆಚ್ಚು ದೂರುಗಳು ಬಂದಿವೆ. ಕರ್ನಾಟಕದಲ್ಲಿ 394, ದೆಹಲಿಯಲ್ಲಿ 352, ಮತ್ತು ಹರಿಯಾಣದಲ್ಲಿ 314 ದೂರುಗಳು ದಾಖಲಾಗಿವೆ.