ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹೂಗಳಿಗೆ ಭಾರಿ ಬೇಡಿಕೆ

ಮಂಗಳವಾರ, 2 ಆಗಸ್ಟ್ 2022 (21:07 IST)
ಶ್ರಾವಣ ಮಾಸ ಆರಂಭವಾಗುತ್ತಿದ್ದಂತೆ ಹೂಗಳಿಗೆ ಭಾರಿ ಬೇಡಿಕೆ ಕುದುರಿದೆ. ಶ್ರಾವಣ ಮಾಸದಲ್ಲಿ ನಾಗರ ಪಂಚಮಿ, ವರಮಹಾಲಕ್ಷ್ಮೀ ಪೂಜೆ, ಕೃಷ್ಣ ಅಷ್ಟಮಿ, ಗಣೇಶ ಚತುರ್ಥಿ ಹೀಗೆ ಸಾಲು ಸಾಲು ಹಬ್ಬಗಳು ಇರುವುದರಿಂದ ಜನರು ಹೂ ಖರೀದಿಗೆ ಮುಗಿಬಿದ್ದಿದ್ದಾರೆ. ಬೇಡಿಕೆ ತಕ್ಕಂತೆ ಹೂವುಗಳಲ್ಲಿರುವುದರಿಂದ ದುಪ್ಪಟ್ಟು ಹಣ ಕೊಟ್ಟು ಜನರು ಖರೀದಿಸತೊಡಗಿದ್ದಾರೆ. ಸರತಿ ಸಾಲಿನಲ್ಲಿ ಹಬ್ಬಗಳು ಬರುತ್ತಿದ್ದು ಧಾರ್ಮಿಕ ವಿಧಿ ವಿಧಾನಗಳಿಗೆ ಹೂಗಳಿಗೆ ಭಾರಿ ಪ್ರಾಧಾನ್ಯತೆ ಇದೆ. ಮಳೆಗಾಲದಲ್ಲಿ ಹೂವಿನ ಬೇಡಿಕೆ ಕಡಿಮೆ ಇದ್ದುದರಿಂದ ದರ ಕುಸಿತ ಸಹಜವಾಗಿದ್ದು, ಈ ಬಾರಿಯ ಹೂವಿನ ಬೆಲೆ ಹೆಚ್ಚಳದಿಂದ ಹೂ ಬೆಳೆಬೆಳೆಯುವ ರೈತರ ಮೊಗದಲ್ಲಿ ಸಂತಸ ಉಂಟುಮಾಡಿದೆ. ಆದರೆ ಮಧ್ಯವರ್ತಿಗಳ ಹಾವಳಿ ಬೆಲೆ ಏರಿಕೆಗೆ ಸವಾಲಾಗಿ ಪರಿಣಮಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ