ಮತ್ತೆ ಕುಸಿದ KRS ಡ್ಯಾಂ ರಿನ ಮಟ್ಟ

ಗುರುವಾರ, 22 ಜೂನ್ 2023 (13:51 IST)
ರಾಜ್ಯದಲ್ಲಿ ಮುಂಗಾರು ಮಳೆ ಬಾರದ ಹಿನ್ನೆಲೆಯಲ್ಲಿ ಜಲಾಶಯಗಳಲ್ಲಿನ ನೀರಿನ ಮಟ್ಟ ಕಡಿಮೆಯಾಗಿದೆ. ಕಾವೇರಿ ಜಲಾನಯನ ಪ್ರದೇಶಕ್ಕೆ ಕೃಪೆ ತೋರದ ಮಳೆರಾಯ.KRS ಡ್ಯಾಂ‌ ನೀರಿನ ಮಟ್ಟ ಮತ್ತೆ ಕುಸಿದಿದೆ. ನಾಲೆಗಳಿಗೆ ನೀರು ಬಿಡುಗಡೆ ಮಾಡಿದ 5 ದಿನಕ್ಕೆ 1 TMC ನೀರು ಖಾಲಿಯಾಗಿದೆ. ಡ್ಯಾಂನಲ್ಲಿ ಕೇವಲ 11 TMC ನೀರು ಮಾತ್ರ ಲಭ್ಯವಿದ್ದು, ಕಾವೇರಿ ಒಡಲು ಬರಿದಾಗುವ ಆತಂಕ ಶುರುವಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆ.ಆರ್.ಎಸ್ ಡ್ಯಾಂನಲ್ಲಿ ಸದ್ಯ 124.80 ಅಡಿ ಗರಿಷ್ಠ ಮಟ್ಟದ ಡ್ಯಾಂ. ದ್ಯ 80.62 ಅಡಿ ನೀರು ಸಂಗ್ರಹವಿದೆ. 49.452 TMC ಸಾಮರ್ಥ್ಯದ ಡ್ಯಾಂನಲ್ಲಿ ಕೇವಲ 11 TMC ನೀರು ಸಂಗ್ರಹವಿದೆ. ಡ್ಯಾಂಗೆ ಹರಿದು ಬರುತ್ತಿರುವ 319 ಕ್ಯೂಸೆಕ್ ನೀರು. ಒಳ ಹರಿವಿಗಿಂತ ಹೊರ ಹರಿವಿನ ಪ್ರಮಾಣವೇ ಹೆಚ್ಚಾಗಿದೆ. ಡ್ಯಾಂನಿಂದ ನಾಲೆಗಳಿಗೆ 3,273 ಕ್ಯೂಸೆಕ್ ನೀರು ಬಿಡುಗಡೆ. ಮತ್ತೆ ಸಂದಿಗ್ಧ ಪರಿಸ್ಥಿತಿಗೆ ಸಿಲುಕಿದ ಕಾವೇರಿ ನೀರಾವರಿ ನಿಗಮ. 11 ಟಿಎಂಸಿಯಲ್ಲಿ ಕೇವಲ 4 TMC ನೀರು ಬಳಕೆಗೆ ಯೋಗ್ಯವಿದೆ. ಉಳಿದ ಏಳು ಟಿಎಂಸಿ ನೀರು ಡೆಡ್ ಸ್ಟೋರೇಜ್. ಮಳೆಗಾಗಿ ಪರ್ಜನ್ಯ ಜಪ, ಹೋಮ ಮಾಡಿದ್ರು ಕೃಪೆ ತೋರದ ವರುಣ. ಐದಾರು ದಿನದಲ್ಲಿ ಮಳೆ ಸುರಿಯದಿದ್ದರೇ ನಾಲೆಗೆ ಬಿಡುತ್ತಿರುವ ನೀರು ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಗ್ರಾಮೀಣ ಪ್ರದೇಶಕ್ಕೂ KRS ನಿಂದಲೇ ನೀರು ಪೂರೈಕೆ. ವರುಣ ಕೈಕೊಟ್ಟರೇ ಕುಡಿಯುವ ನೀರಿಗೂ ಅಭಾವ ಸೃಷ್ಟಿಯಾಗುವ ಆತಂಕ ಎದುರಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ