ಶಾಸಕಾಂಗ ಪಕ್ಷದ ನಾಯಕ, ರಾಜ್ಯಾಧ್ಯಕ್ಷ ಇಬ್ಬರು ಇರ್ತಾರೆ ಬಹಳ ಸಂತೋಷ.ಅವರ ಧ್ವನಿ ಆಚಾರ, ವಿಚಾರ, ಸರ್ಕಾರ ತಪ್ಪು ಮಾಡಿದ್ಯಿಯಾ.?ಬರಗಾಲದಲ್ಲಿ ಏನಾದರೂ ತೊಂದರೆ ಆಗಿದ್ಯಿಯಾ..?ಸರ್ಕಾರದ ವೈಫಲ್ಯ ಎತ್ತಿ ಹಿಡಿಯುವುದು ಬಿಟ್ಟು,ಉತ್ತರ ಕರ್ನಾಟಕ ಸಮಸ್ಯೆ ಚರ್ಚೆ ಮಾಡೋದು ಬಿಟ್ಟು,ಒಳಗಡೆಯ ಅವಕಾಶ ಬಿಟ್ಟು, ಹೊರಗಡೆ ಮಾಡ್ತೇನಿ ಎಂದರೆ ಯಾರ್ರೀ ಕೇಳ್ತಾರೆ.ಯಡಿಯೂರಪ್ಪ ಆದರೂ ಆಗಲಿ ಯಾರಾದರೂ ಬರಲಿ_ಅವರು ಯಾವುದಾದರೂ ಒಂದು ಕ್ಷೇತ್ರ ತೆಗೆದುಕೊಂಡು ಮಾತಾಡಲಿ ನಮಗೆ ಯಾವುದೇ ತೊಂದರೆ ಇಲ್ಲ ಎಂದು ಡಿಕೆಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.
ಅಲ್ಲದೇ ಬಿಜೆಪಿ ನಾಯಕರು ಎಷ್ಟು ದುರ್ಬಲ ಆಗಿದೆ ಎನ್ನುವುದಕ್ಕೆ ಇದೊಂದು ಕಾರಣ.66 ಶಾಸಕರನ್ನ ಒಳಗಡೆ ಮಾತಾಡಲಿ ಎಂದು ಕಳಿಸಿಕೊಟ್ಟಿದ್ದಾರೆ.ಒಳಗಡೆ ಮಾತಾಡೋದು ಬಿಟ್ಟು, ಹೊರಗೆ ಮಾತಾಡುತ್ತೇನೆ ಎಂದು ಯಾರ್ರೀ ಕೇಳ್ತಾರೆ.ಅವರ ವೈಫಲ್ಯ, ದುರ್ಬಲ ಇದರಿಂದ ಅರ್ಥ ಆಗುತ್ತಿದೆ ಎಂದು ಡಿಕೆಶಿವಕುಮಾರ್ ವ್ಯಂಗ್ಯ ಮಾಡಿದ್ದಾರೆ.