ಸಂಪುಟ ಪುನಾರಚನೆ ಸಂದರ್ಭದಲ್ಲಿ ಕೆಲವರನ್ನು ಕೈ ಬಿಡಲಾಗುತ್ತದೆ ಎಂದು ಮಂತ್ರಿ ಪರಿಷತ್ ಸಭೆಯಲ್ಲಿ ಸ್ಪಷ್ಟಪಡಿಸಿದ್ದೆ. ಆದ್ದರಿಂದ ಶಾಸಕರೊಂದಿಗೆ, ಸಚಿವರೊಂದಿಗೆ ಪ್ರತ್ಯೇಕವಾಗಿ ಚರ್ಚೆ ನಡೆಸಲು ಹೋಗಿಲ್ಲ. ಒಂದು ವೇಳೆ ಯಾರಿಗಾದರೂ ಅಸಮಾಧಾನವಾಗಿದ್ದಲ್ಲಿ ಅವರೊಂದಿಗೆ ಚರ್ಚೆ ನಡೆಸುತ್ತೇನೆ ಎಂದು ಭರವಸೆ ನೀಡಿದರು.
ಹಿರಿಯ ಕಾಂಗ್ರೆಸ್ ಮುಖಂಡ ವಿ.ಶ್ರೀನಿವಾಸ್ ಪ್ರಸಾದ್, ಎ.ಬಿ.ಮಲಕರೆಡ್ಡಿ, ಮತ್ತು ಸಮಾನ ಮನಸ್ಕ ವೇದಿಕೆ ಶಾಸಕರ ಮುಖಂಡ ಎಸ್.ಟಿ.ಸೋಮಶೇಖರ್ ಪ್ರತ್ಯೇಕ ಸಭೆ ನಡೆಸಿ ನಾಯಕತ್ವ ಬದಲಾವಣೆಗೆ ಒತ್ತಾಯಿಸಿದ್ದಾರೆ ಎನ್ನುವ ಆರೋಪಿಗಳು ಸತ್ಯದಿಂದ ದೂರವಾಗಿವೆ ಎಂದು ಸಿಎಂ ಸಿದ್ದಾರಾಮಯ್ಯ ತಿಳಿಸಿದ್ದಾರೆ.