ಬಾಕಿ ಬಿಲ್ ಪಾವತಿ ಬಗ್ಗೆ ಕೆಂಪಣ್ಣ ಆರೋಪ ವಿಚಾರವಾಗಿ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.ತನಿಖೆ ಪೆಂಡಿಂಗ್ ಇದ್ದರೂ 65-70% ಅಷ್ಟು ಬಿಲ್ ರಿಲೀಸ್ ಮಾಡೋಕೆ ಆದೇಶ ಮಾಡಿದ್ದೀವಿ.ಕೆಂಪಣ್ಣ ಹೇಳಿದ್ರು ರಿಕ್ವೆಸ್ಟ್ ಮಾಡಿದ್ರು ಅವರಿಗೆ ಸಹಾಯ ಆಗಬೇಕು ಅಂತ ಆದೇಶ ಮಾಡಿದ್ದೇವೆ.ಸೀನಿಯಾರಿಸಿ ಮೇಲೆ ಬಿಲ್ ಬಿಡುಗಡೆ ಮಾಡಿದ್ದೀವಿ.ಕೆಂಪಣ್ಣ ಗಾಬರಿ ಪಡಬೇಕಾದ ಅಗತ್ಯ ಇಲ್ಲ.ಅವರ ನೋವು ಏನಾದ್ರು ಇದ್ರೆ ಹೇಳಲಿ ಅವರಿಗೆ ನ್ಯಾಯ ಒದಗಿಸುವ ಕೆಲಸ ಮಾಡುತ್ತೇವೆ ಎಂದು ಡಿಕೆಶಿವಕುಮಾರ್ ಹೇಳಿದ್ರು.
ಬೆಂಗಳೂರಲ್ಲಿ ಐಟಿ ದಾಳಿ ಬಗ್ಗೆ ಡಿಕೆಶಿ ಪ್ರತಿಕ್ರಿಯಿಸಿದ್ದು,ಪೊಲಿಟಿಕ್ಸ್ ಇಲ್ಲದೆ ಐಟಿಯವರು ಬರೋದಿಲ್ಲ.ರಾಜಕೀಯವೇ ನಡಿತಾ ಇರೋದು ನಮಗೆಲ್ಲ ಗೊತ್ತಿದೆ .ಛತ್ತೀಸ್‌ಘಡದಲ್ಲಿ ತೆಲಂಗಾಣದಲ್ಲೂ ನಡಿತಾ ಇದೆ .ಬಿಜೆಪಿಯಲ್ಲಿ ಎಲ್ಲಿ ಅಧಿಕಾರದಲ್ಲಿ ಇರುವುದಿಲ್ಲ ಅಲ್ಲಿ ಮಾತ್ರ ನಡೆಯುತ್ತೆ .ರೇಟ್ ಎಲ್ಲಾಯಿತು ಏನಾಯ್ತು ಯಾರಿಗಾಯ್ತು ನನಗೆ ಗೊತ್ತಿಲ್ಲ. ಕೆಲವು ಪಾಲಿಟಿಕ್ಸ್ ಇರುತ್ತದೆ.
ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ವಿಚಾರವಾಗಿ ಮುಖ್ಯಮಂತ್ರಿಗಳು ಲೋಡ್ ಶೆಡ್ಡಿಂಗ್ ವಿಚಾರದಲ್ಲಿ ಮೀಟಿಂಗ್ ಕರೆದಿದ್ದಾರೆ.ಯಾರ್ಯಾರ ಕಾಲದಲ್ಲಿ ಎಷ್ಟು ಪವರ್ ಜನರೇಟ್ ಆಯ್ತು ಅಂತ ನನ್ನತ್ರ ಮಾಹಿತಿ ಇದೆ.ನಾವಿದ್ದಾಗ ಎಷ್ಟು ಆಯ್ತು ಹಿಂದೆ ಎಷ್ಟಾಗಿದೆ .ಎಷ್ಟು ಹೆಚ್ಚುವರಿ ಇದೆ ಏನ್ ಪ್ರಿಪರೇಷನ್ ಎಲ್ಲದರ ಕುರಿತು ಮೀಟಿಂಗ್ ನಡೆಯಲಿದೆ.ಮುಖ್ಯಮಂತ್ರಿಗಳ ಮೀಟಿಂಗ್ ಮುಗಿಯಲಿ ಆನಂತರ ಮಾತನಾಡುತ್ತೇನೆ ಎಂದು ಡಿಸಿಎಂ ಡಿಕೆಶಿವಕುಮಾರ್ ಹೇಳಿದ್ರು.