ಇಲಾಖೆಯಲ್ಲಿ ಸಮನ್ವಯದ ಕೊರತೆ ಇದೆ-ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ

ಗುರುವಾರ, 12 ಅಕ್ಟೋಬರ್ 2023 (20:30 IST)
ಕರ್ನಾಟಕ ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಮಾಡಿರೋ ಅನಾಹುತ ನೋಡಿದ್ರೆ ಸಂಪೂರ್ಣ ರೈತ ವಿರೋಧಿ ನಿಲುವನ್ನ ತೆಗೆದುಕೊಂಡಿದೆ.ಏಳು ಗಂಟೆ ಕೊಡಬೇಕಿದ್ದ ವಿದ್ಯುತ್ ಎರಡು ಗಂಟೆಗೆ ಇಳಿಸಿದ್ದಾರೆ.ಬಿತ್ತನೆ ಬೀಜ‌ಹಾಳಾಗಿದೆ, ಗೊಬ್ಬರ ಸಮಸ್ಯೆ ಇದೆ.ಇದರ ನಡುವೆ ಲೋಡ್ ಶೆಡ್ಡಿಂಗ್ ಇಂದ ಬೆಳೆ ಉಳಿಸಿಕೊಳ್ಳಲು ಆಗಿಲ್ಲ.ವಿದ್ಯುತ್ ಖರೀದಿ ಏನು ಬೇಕಾದ್ರೂ ಮಾಡಿ.ರೈತರ ಬಾಳಲ್ಲಿ ಚಲ್ಲಾಟ ಆಡೋದು ಸರಿಯಲ್ಲ.ಕೃಷಿ ಸಚಿವ ಚಲುವರಾಯಸ್ವಾಮಿ ರೈತರಿಗೆ ಅನ್ಯಾಯ ಆಗಿದೆ ಅಂತ ಹೇಳ್ತಿದ್ದಾರೆ.ಇಂಧನ ಸಚಿವರು ಒಪ್ಪಿಕೊಳ್ತಿಲ್ಲ.ಇಲಾಖೆಯಲ್ಲಿ ಸಮನ್ವಯದ ಕೊರತೆ ಇದೆ.ಸಿದ್ದರಾಮಯ್ಯ, ಡಿಕೆಶಿ ಗಮನ ಹರಿಸದಿದ್ರೆ.ರೈತರಿಗೆ ಆಗೋ ಅನ್ಯಾಯಕ್ಕೆ, ಸಮಸ್ಯೆಗೆ , ಆತ್ಮಹತ್ಯೆಗೆ ಸಿಎಂ, ಡಿಸಿಎಂ ನೇರ ಕಾರಣ.ರೈತರ ಸಮಸ್ಯೆ ಬಗೆಹರಿಸದಿದ್ರೆ ಬಿಜೆಪಿ ಮುಂದಿನ ದಿನದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ