ಎಸ್ ಡಿ ಪಿ ಐ, ಪಿ ಎಪ್ ಐ ಜೊತೆ ಕಾಂಗ್ರೆಸ್‌ ನಂಟಿನ‌ ಬಗ್ಗೆ ತನಿಖೆ ಆಗಬೇಕು : ಶೋಭಾ ಕರಂದ್ಲಾಜೆ

ಶುಕ್ರವಾರ, 17 ಮಾರ್ಚ್ 2023 (18:29 IST)
ಕಾಂಗ್ರೆಸ್  ಮತ್ತು ಎಸ್ ಡಿ ಪಿ ಐ ನಡುವಿನ ನಡುವಿನ ಸಂಬಂಧದ ಬಗ್ಗೆ ತನಿಖೆ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ.ಈ ಬಗ್ಗೆ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಅವರು ನಿನ್ನೆ ಬಂಟ್ವಾಳದಲ್ಲಿ SDPI ರಾಷ್ಟ್ರೀಯ ಅಧ್ಯಕ್ಷ ತುಂಬೆ ಅವರು ಹೇಳಿದ್ದಾರೆ.ಕಳೇದ ಭಾರಿ ಚುನಾವಣೆಯಲ್ಲಿ 25 ಅಭ್ಯರ್ಥಿಗಳನ್ನ ಸ್ಪರ್ದೆ ಗೆ ನಿಲ್ಲಿಸುವುದಕ್ಕೆ ತೀರ್ಮಾನ ಮಾಡಿದ್ವಿ ಆದರೆ.ಕಾಂಗ್ರೆಸ್ ನಾಯಕರು ಬೇಡ ಅಂದರು ಅದಕ್ಕೆ ನಾವು 3 ಅಭ್ಯರ್ಥಿಗಳನ್ನ ಮಾತ್ರ ನಾವು ಕಣಕ್ಕಿಳಿಸಿದೆವು ಎಂದು ಹೇಳಿದ್ದಾರೆ. ಈ ಮೂಲಕ ಹಿಂದೆ ಕಾಂಗ್ರೆಸ್ ಜೊತೆ ಹೇಗೆ ಚುನಾವಣೆ ಹೊಂದಾಣಿಕೆ ಇತ್ತು ಅಂತ ತಿಳಿಸಿದ್ದಾರೆ.ಬಹಳ ವರ್ಷದಿಂದ ಮಾತಾಡುತ್ತಾ ಬಂದಿದ್ವಿ ನಾವು .ಕಾಂಗ್ರೆಸ್ ನ ಇನ್ನೊಂದು ಮುಖ SDPI, PFI ಅಂತ.SDPI, PFI ದೇಶಗಳಲ್ಲಿ ಏನೆಲ್ಲಾ ಕೃತ್ಯ ಮಾಡಿಕೊಂಡು ಬಂದಿತ್ತು ಅಂತ.ಅನೇಕ ಯುವಕರ ಹತ್ಯೆ ಆಯ್ತು.ಅದರೆ ಆಹತ್ಯೆಗಳನ್ನ ತನಿಖೆ ಮಾಡಿಸದೇ  ಸಿದ್ದರಾಮಯ್ಯ ಅವರು  ಸಮುದಾಯವನ್ನು ಓಲೈಕೆ ಮಾಡುವ ಕೆಲಸ ಮಾಡಿದ್ರು.ಟಿಪ್ಪು ಜಯಂತಿಯನ್ನ ಮಾಡೋ ಮೂಲಕನೂ ಓಲೈಕೆ ಮಾಡಿದ್ರು.ಟಿಪ್ಪು ಜಯಂತಿ ಹಿಂದೂ, ಮುಸ್ಲಿಂ ನಡುವೆ ಪರಸ್ಪರ ಜಗಳ ಮಾಡುವ ಕೆಲಸ ಆಗಿತ್ತು ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ