ನಮ್ಮ ಕಾಲದಲ್ಲಿ ಯಾವುದೇ ಬಿಕ್ಕಟ್ಟು, ಇಕ್ಕಟ್ಟು ಇರಲಿಲ್ಲ-ಬೊಮ್ಮಯಿ

ಮಂಗಳವಾರ, 19 ಸೆಪ್ಟಂಬರ್ 2023 (15:01 IST)
ಕಾವೇರಿ ನೀರು ಡಿಸಿಎಂ ಡಿಕೆಶಿ ತಿರುಗೇಟು ವಿಚಾರವಾಗಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದಾರೆ.ಸಂಸದರ ನಿಯೋಗ ತಗೊಂಡು ಹೋಗೊಕೆ ಸಮಸ್ಯೆ ಇಲ್ಲ.ಸರ್ಕಾರ ಮುಂದಾಳತ್ವ ತಗೋಬೇಕು.ನಿಮ್ಮ ಸರ್ಕಾರ ಸುಪ್ರೀಂಕೋರ್ಟ್ ಮುಂದೆ ಅಫಿಡವಿಡ್ ಹಾಕಿದೆ.ನೀವು ಅದಕ್ಕೆ ಬದ್ದರಾಗಬೇಕಲ್ಲ.ಈಗ ಅಫಿಡವಿಟ್ ನಂತರವೂ ನೀರು ಬಿಡೋಕೆ ಹೋದ್ರೆ ಸುಳ್ಳು ಹೇಳಿದ ಹಾಗೇ ಆಗುತ್ತೆ.ಸರ್ಕಾರದ ಪ್ರತಿಯೊಂದು ನಡೆ ರೈತರನ್ನು,ಜನಸಾಮಾನ್ಯರನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.ಸರ್ಕಾರ ಕಾವೇರಿ ಜಲಾಶಯನದ ಮಕ್ಕಳನ್ನು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ.ನಾವಿದ್ದಾಗಲೂ ಇಂತಹ ತೀರ್ಪು ಬಂದಿದೆ,ಆದ್ರೆ ರಿವ್ಯೂ ಹಾಕಿದ್ವಿ.ನೀರು ಬಿಟ್ಟ ಮೇಲೆ ವಾದ ಮಾಡಿ ಪ್ರಯೋಜನ ಇಲ್ಲ.ಇದೆಲ್ಲವೂ ಕೂಡ ಸರ್ಕಾರದಲ್ಲಿ ಕೆಲಸ ಮಾಡುವವರಿಗೆ ಅರಿವು ಇರಬೇಕು.ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಪ್ರಧಾನಿ ಬಳಿ ಹೋಗೊಣ ಅಂತ ಹೇಳ್ತಿದ್ದಾರೆ.ತಮಿಳುನಾಡು ಸರ್ಕಾರ ನೀರಾವರಿ ಸಚಿವರನ್ನು ಬೇಟಿ ಮಾಡಿದ್ರು.ಯಾವಗಲೂ ತಮಿಳುನಾಡು ಸರ್ಕಾರ ಸಹಕಾರ ನೀಡಿಲ್ಲ.ನೀಡೋದು ಇಲ್ಲ ಎಲ್ಲರಿಗೂ ಗೊತ್ತಿದೆ.ವ್ಯರ್ಥ ಮಾತುಕತೆ ಆಗಬಾರದು?ನಮ್ಮ ವಸ್ತುಸ್ಥಿತಿ ಮಾತ್ರವಲ್ಲ ತಮಿಳುನಾಡು ವಸ್ತುಸ್ಥಿತಿ  ಯಾವಾಗಲೂ ಮಾತನಾಡಲ್ಲ.ತಮಿಳುನಾಡು ಅಣೆಕಟ್ಟಿನ ಪರಸ್ಥಿತಿ ಬಗ್ಗೆ ಎಲ್ಲಿವರೆಗೂ ಸರ್ಕಾರ ಮಾತನಾಡಲ್ಲ, ಅಲ್ಲಿವರೆಗೂ ಸಮಸ್ಯೆ ಬಗೆಹರಿಯಲ್ಲ ಎಂದು ಬಸವರಾಜ್  ಬೊಮ್ಮಯಿ ಹೇಳಿದ್ದಾರೆ.
 
ಇನ್ನೂ ರಾತ್ರೋರಾತ್ರಿ ನಮ್ಮ ಸರ್ಕಾರ ನೀರು ಬಿಟ್ಟಿಲ್ಲ.ನಮ್ಮ ಕಾಲದಲ್ಲಿ ಯಾವುದೇ ಬಿಕ್ಕಟ್ಟು, ಇಕ್ಕಟ್ಟು ಇರಲಿಲ್ಲ.CWA ರಚನೆ ಆದ ಮೇಲೆ ಬೇರೆ ಪರಿಸ್ಥಿತಿ ಇದೆ.2018 ರ ಬಳಿಕ ಮೊದಲ ಬಾರಿಗೆ ನೀರಿನ ಅಭಾವವಾಗಿದೆ.ಸರ್ಕಾರಕ್ಕೆ ಪರೀಕ್ಷೆಯಾಗಿದೆ.ಸರ್ಕಾರ ಚಾಕಚಕ್ಯತೆಯಿಂದ ಬಗೆಹರಿಸಬೇಕುಮನಾವು ಬೇಕಾದ ಸಹಕಾರ ನೀಡುತ್ತೇವೆ.ನಮ್ಮ ಸಂಸದರಿಗೆ ಹೇಳಿದ್ದೇನೆ.ಕೂಡಲೇ ನೀರಾವರಿ ಸಚಿವರನ್ನು ಭೇಟಿ ಮಾಡಿ ವಸ್ತುಸ್ಥಿತಿ ಹೇಳಬೇಕು ಎಂದು ಸೂಚಿಸಿದ್ದೇನೆ ಎಂದು ಮಾಜಿ ಸಿಎಂ ಬಸವರಾಜ್ ಬೊಮ್ಮಯಿ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ