ನ್ಯೂ ಇಯರ್ ಗೆ ವಿಶ್ ಮಾಡದ ವ್ಯಕ್ತಿಗೆ ಚಾಕುವಿನಿಂದ ಇರಿದ ಕಿಡಿಗೇಡಿಗಳು

ಬುಧವಾರ, 2 ಜನವರಿ 2019 (07:05 IST)
ಬೆಂಗಳೂರು : ಹೊಸ ವರ್ಷಕ್ಕೆ ಶುಭಾಶಯ ಹೇಳದೇ ಇದ್ದದಕ್ಕೆ ಕಿಡಿಗೇಡಿಗಳು ವ್ಯಕ್ತಿಯೊಬ್ಬನಿಗೆ ಚಾಕುವಿನಿಂದ ಇರಿದ ಘಟನೆ ತಡರಾತ್ರಿ 12 ಗಂಟೆಗೆ ಬೆಂಗಳೂರಿನ ಕುರುಬರಹಳ್ಳಿಯ ಕಮಲಾನಗರದ ಶೆಟ್ಟಿ ಗಣಪತಿ ವಾರ್ಡ್ ನಲ್ಲಿ ನಡೆದಿದೆ.


ಪ್ರವೀಣ್ ಕಿಡಿಗೇಡಿಗಳಿಂದ ಚಾಕು ಇರಿತಕ್ಕೆ ಒಳಗಾದ ವ್ಯಕ್ತಿಯಾಗಿದ್ದು, ಈತ ರಾತ್ರಿ ನಡೆದುಕೊಂಡು ಬರುತ್ತಿರುವ ವೇಳೆ ಕಿಡಿಗೇಡಿಗಳು ಕುಡಿದು ಬೈಕಿನಲ್ಲಿ ಬಂದು ಈತನನ್ನು ಅಡ್ಡಗಟ್ಟಿ ನ್ಯೂ ಇಯರ್ ವಿಶ್ ಮಾಡಿದ್ದಾರೆ. ಬಳಿಕ ನಮಗೆ ವಿಶ್ ಮಾಡು ಎಂದು ಅವಾಜ್ ಹಾಕಿದ್ದಾರೆ.


ಆಗ ಅವರ ಕೈಲಿದ್ದ ಚಾಕುವನ್ನು ಕಂಡು ಗಾಬರಿಗೊಂಡು ಪರಾರಿಯಾಗಲು ಯತ್ನಿಸಿದ ಪ್ರವೀಣ್ ಗೆ ಕಿಡಿಗೇಡಿಗಳು ವಿಶ್ ಮಾಡುವುದಿಲ್ಲವಾ ನೀನು ಎಂದು ಅಡ್ಡಹಾಕಿ ಕೈ ಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. 
ಗಾಯಗೊಂಡ ಪ್ರವೀಣ್ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ