ಮುಳುಗುತ್ತಿದ್ದ ಭಕ್ತನನ್ನು ಬದುಕಿಸಿದ ವಿಗ್ನ ವಿನಾಶಕ ಈ ಗಣಪ
ಸೂರತ್‌ನ ಬೀಚೊಂದರಲ್ಲಿ ನಡೆದ ಪವಾಡ ಸದೃಶ ಘಟನೆಯಲ್ಲಿ ಸಮುದ್ರದಲ್ಲಿ ಮುಳುಗಿ ನಾಪತ್ತೆಯಾಗಿದ್ದ 13 ವರ್ಷದ ಬಾಲಕ 36 ಗಂಟೆಗಳ ಬಳಿಕ ಜೀವಂತವಾಗಿ ಪತ್ತೆಯಾಗಿದ್ದಾನೆ.ಕಳೆದ ಶುಕ್ರವಾರ ಸೂರತ್‌ನ ನಿವಾಸಿ ಲಖನ್ ದೇವಿಪೂಜಕ್ ಎಂಬ 13 ವರ್ಷದ ಬಾಲಕ ತನ್ನ ಅಜ್ಜಿ ಮತ್ತು ಒಡಹುಟ್ಟಿದವರ ಜತೆ ಬೀಚ್‌ನಲ್ಲಿ ಗಣೇಶ ವಿಸರ್ಜನೆಯನ್ನು ವೀಕ್ಷಿಸಲು ತೆರಳಿದ್ದ. ಅಲ್ಲಿದ್ದಾಗ, ಅವನು ಮತ್ತು ಅವನ ಸಹೋದರ ಈಜಲು ಸಮುದ್ರಕ್ಕೆ ಹೋಗಿದ್ರು, ಈ ಸಮಯದಲ್ಲಿ 13 ವರ್ಷದ ಬಾಲಕ ಲಖನ್ ಮತ್ತು ಅವನ ಸಹೋದರ ಸಮುದ್ರದಲ್ಲಿ ಮುಳುಗುವಾಗ ಲಖನ್ ಸಹೋದರನನ್ನು ಜನರು ರಕ್ಷಿಸಿದರೆ, ಲಖನ್ ನಾಪತ್ತೆಯಾಗಿದ್ದ ಆದ್ರೆ ಇದೀಗ ಪವಾಡ ಎಂಬಂತೆ ಬಾಲಕ ಜೀವಂತವಾಘಿ ಬಂದಿದ್ದಾನೆ.