ಗ್ರಾಮದಲ್ಲಿ ದೇವಸ್ಥಾನ ಮತ್ತು ಮಸೀದಿ ಎರಡು ಮುಖಾಮುಖಿ ಇದ್ದು, ಮಸೀದಿ ಇರುವ ಕಾರಣಕ್ಕೆ ಪಟಾಕಿ ಸಿಡಿಸದಂತೆ DySP ಶಿವಾನಂದ ಸೂಚಿಸಿದ್ದರು. ಈ ವೇಳೆ ಹಿಂದೂ ಜಾಗರಣಾ ವೇದಿಕೆ ಜಿಲ್ಲಾ ಸಂಚಾಲಕ ದೇವರಾಜ್ ಅರಳಿಹಳ್ಳಿ ನೇತೃತ್ವದಲ್ಲಿ ಗ್ರಾಮಸ್ಥರು ನಡುರಾತ್ರಿ ಧರಣಿ ಕುಳಿತಿದ್ದು, ಪ್ರತಿಭಟನೆಯಲ್ಲಿ ಊರಿನ ಯುವಕರು, ಮಹಿಳೆಯರು ಭಾಗಿಯಾಗಿದ್ದರು. ಪಟಾಕಿ ಹೊಡೆಯಲು ಅನುಮತಿ ನೀಡುವವರೆಗೂ ಧರಣಿ ನಡೆಸುವುದಾಗಿ ರಸ್ತೆಯಲ್ಲಿ ಗಣಪತಿ ಮೆರವಣಿಗೆ ಸ್ಥಗಿತಗೊಳಿಸಿ ಆಕ್ರೋಶ ವ್ಯಕ್ತಪಡಿಸಿದ್ರು. ಸುಮಾರು ಒಂದು ಗಂಟೆ ಕಾಲ ನಡೆದ ವಾಗ್ವಾದದಲ್ಲಿ ಪೊಲೀಸರ ಪಟಾಕಿ ಸಿಡಿಸಲು ಅನುಮತಿ ನೀಡಿದ್ರು. ಅನುಮತಿ ಸಿಕ್ಕ ಹಿನ್ನೆಲೆ ಮೆರವಣಿಗೆ ಮುಂದುವರೆದು ಗಣೇಶ ವಿಸರ್ಜನೆ ಮಾಡಲಾಯ್ತು.