ಇದೊಂದು ನಿರಾಶಾದಾಯಕ ಬಜೆಟ್; ಸಿದ್ದರಾಮಯ್ಯ

ಮಂಗಳವಾರ, 1 ಫೆಬ್ರವರಿ 2022 (16:48 IST)
ಮೈಸೂರು : ಬಜೆಟ್ನಲ್ಲಿ ಕರ್ನಾಟಕಕ್ಕೆ ನೀರಾವರಿಗೆ ಆದ್ಯತೆ ಕೊಡುತ್ತಾರೆ ಅಂತ ನಿರೀಕ್ಷೆ ಇತ್ತು.

ಕರ್ನಾಟಕ ರಾಜ್ಯದ ಜನರ ನಿರೀಕ್ಷೆ ಹುಸಿಯಾಗಿದೆ. ದೇಶದ ಭವಿಷ್ಯದ ದೃಷ್ಟಿಯಿಂದ ನಿರಾಶಾದಾಯಕ ಬಜೆಟ್ ಇದಾಗಿದೆ. ಬಜೆಟ್ ಪ್ರತಿ ಸಂಪೂರ್ಣ ಓದಿದ ನಂತರ ವಿಶ್ಲೇಷಿಸುವೆ. ರಾಜ್ಯದಲ್ಲಿ ಬಿಜೆಪಿಯ 25 ಸಂಸದರಿದ್ದರೂ ಅನುಕೂಲವಿಲ್ಲ.

ರಾಜ್ಯದ ಜನರಿಗೆ ಬಿಜೆಪಿ ಸಂಸದರಿಂದ ಪ್ರಯೋಜನವಿಲ್ಲ. ನಿರ್ಮಲಾ ಸೀತಾರಾಮನ್ ಕರ್ನಾಟಕದಿಂದ ಆಯ್ಕೆಯಾಗಿದ್ದಾರೆ. ಆದರೆ ಕರ್ನಾಟಕಕ್ಕೆ ಯಾವುದೇ ಯೋಜನೆಯನ್ನು ನೀಡಿಲ್ಲ. ರಾಜ್ಯಕ್ಕೆ ಕೊಡಬೇಕಿದ್ದ 5,495 ಕೋಟಿ ಹಣ ಕೊಡಲೇ ಇಲ್ಲ. ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದ್ದರೂ ನೀಡುತ್ತಿಲ್ಲ.

ರಾಜ್ಯದ ಪಾಲಿನ ಜಿಎಸ್ಟಿ ಪಾಲಿನ ಹಣವನ್ನೂ ಕೊಡಲಿಲ್ಲ. ರಾಜ್ಯಕ್ಕೆ ಉSಖಿ ಹಣ ಬರದಿದ್ದರೆ ಪರಿಸ್ಥಿತಿ ಬಿಗಡಾಯಿಸಲಿದೆ. ಮೋದಿ ಮುಂದೆ ರಾಜ್ಯ ಸಂಸದರು ಹೇಡಿಗಳಂತೆ ವರ್ತಿಸ್ತಾರೆ. ರಾಜ್ಯದ ಪಾಲಿನ ಹಣ ಕೇಳುವುದಕ್ಕೂ ಸಂಸದರಿಗೆ ತಾಕತ್ತಿಲ್ಲ.

ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಇದನ್ನು ಪ್ರಶ್ನಿಸುತ್ತಿಲ್ಲ. ಮಾತಾಡ ಬೇಕಾದ ಜಾಗದಲ್ಲಿ ಸಂಸದರು ಮೌನವಾಗಿದ್ದಾರೆ ಎಂದು ಕಬಿನಿ ರೆಸಾರ್ಟ್ನಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ