
ಮದುವೆಯಾಗದೇ ಒಟ್ಟಿಗೆ ಇದ್ದ ಯುವಕನೊಬ್ಬ ಯುವತಿಯನ್ನು ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ.
	ಕ್ಷುಲ್ಲಕ ಕಾರಣ ಹಾಗೂ ಮನಸ್ತಾಪಗಳಿಂದ ಆಗಾಗ್ಗೆ ಯುವಕ – ಯುವತಿ ಜಗಳ ಆಡುತ್ತಿದ್ದರು ಎನ್ನಲಾಗಿದ್ದು, ಯುವತಿ ಮರಿನಾ (30) ಕೊಲೆಯಾಗಿದ್ದಾಳೆ. 
	ಮರಿನಾಳ ಜೊತೆಗೆ ಆಕೆಯ ಗೆಳೆಯ ರಾಮಸೇನ ಇದ್ದನು. ಒಂದೆರಡು ವರ್ಷಗಳಿಂದ ಮಿಜೋರಾಂನಲ್ಲಿ ಒಟ್ಟಿಗೆ ಇದ್ದ ಈ ಜೋಡಿ ಆಗಾಗ್ಗೆ ಜಗಳ ಮಾಡುತ್ತಿದ್ದರು ಎನ್ನಲಾಗಿದೆ. 
	ಮರಿನಾ ಆಕಸ್ಮಿಕವಾಗಿ ಸಾವನ್ನಪ್ಪಿದ್ದಾಳೆ ಅಂತ ಯುವಕ ಹೇಳುತ್ತಿದ್ದಾನೆ. ಆದರೆ ಸಾವಿನ ವರದಿ ಬಂದ ಬಳಿಕ ಆರೋಪಿಯನ್ನ ಪೊಲೀಸರು ಬಂಧನ ಮಾಡಿದ್ದಾರೆ. 
 
		
