ಈ ಬಾರಿ ದಾಖಲೆ ಮೀರಿದ ಮತದಾನ

ಶುಕ್ರವಾರ, 12 ಮೇ 2023 (17:49 IST)
ಬೆಂಗಳೂರು : ಕರ್ನಾಟಕ ವಿಧಾನಸಭಾ ಚುನಾವಣೆ- 2023ಕ್ಕೆ ಮೇ 10 ರಂದು ಮತದಾನ ಶಾಂತಿಯುತವಾಗಿ ನಡೆಯಿತು. ಈ ಬಾರಿಯ ಚುನಾವಣೆಯಲ್ಲಿ ದಾಖಲೆ ಮತದಾನವಾಗಿದೆ.
 
ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ದಾಖಲೆ ಸೃಷ್ಟಿಗೆ ಕಾರಣೀಕರ್ತರಾಗಿದ್ದಾರೆ. ಮತದಾನ ಪ್ರಮಾಣ ಸಂಬಂಧ ಅಧಿಕೃತ ಮಾಹಿತಿ ಹೊರಬಿದ್ದಿದೆ. ರಾಜ್ಯಾದ್ಯಂತ ಎಷ್ಟು ಪ್ರಮಾಣದಲ್ಲಿ ಮತದಾನವಾಗಿದೆ ಎಂಬ ಮಾಹಿತಿ ಇಲ್ಲಿದೆ.

2018 ರ ಚುನಾವಣೆಯಲ್ಲಿ ರಾಜ್ಯದಲ್ಲಿ ಒಟ್ಟು ಶೇ. 72.36 ರಷ್ಟು ಮತದಾನವಾಗಿತ್ತು. ಆದರೆ ಈ ಬಾರಿ ಶೇ. 73.19 ರಷ್ಟು ಮತ ಚಲಾವಣೆಯಾಗಿದೆ. ಇದರಲ್ಲಿ ಪುರುಷರು ಚಲಾಯಿಸಿದ ಮತ ಪ್ರಮಾಣ ಶೇ. 73.68 ರಷ್ಟಿದೆ. ಅಂತೆಯೇ ಮಹಿಳೆಯರು ಶೇ. 72.70 ರಷ್ಟು ಮತ ಚಲಾಯಿಸಿದ್ದಾರೆ. ಇತರರಿಂದ ಶೇ. 21.05 ರಷ್ಟು ಮತದಾನವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ