ಟುಡೇಸ್‌ ಚಾಣಕ್ಯದಲ್ಲಿ ಕಾಂಗ್ರೆಸ್‌ಗೆ ಅಧಿಕಾರ

ಗುರುವಾರ, 11 ಮೇ 2023 (10:46 IST)
ಬೆಂಗಳೂರು : ಲೋಕಸಭಾ ಚುನಾವಣೆಯಲ್ಲಿ ನಿಖರ ಫಲಿತಾಂಶ ನೀಡಿದ್ದ ಟುಡೇಸ್ ಚಾಣಕ್ಯ ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಚುನಾವಣೋತ್ತರ ಸಮೀಕ್ಷೆಯಲ್ಲಿ ಸ್ಪಷ್ಟವಾಗಿ ತಿಳಿಸಿದೆ.
 
ಬಿಜೆಪಿ 92 ± 11 ಸ್ಥಾನ, ಕಾಂಗ್ರೆಸ್ 120 ± 11 ಸ್ಥಾನ, ಜೆಡಿಎಸ್ 12 ± 7 ಸ್ಥಾನ, ಇತರರು 0 ± 3 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಬಿಜೆಪಿ 39% ± 3%, ಕಾಂಗ್ರೆಸ್ 42% ± 3%, ಜೆಡಿಎಸ್ 13% ± 3%, ಇತರರು 6% ± 3% ರಷ್ಟು ಮತಗಳನ್ನು ಗಳಿಸಬಹುದು ಎಂದು ತಿಳಿಸಿದೆ. 

ಒಟ್ಟು 224 ಸ್ಥಾನಗಳ ಪೈಕಿ ಬಹುಮತಕ್ಕೆ 113 ಸ್ಥಾನ ಬೇಕು. ಮತದಾನ ಮುಗಿದ ಕೂಡಲೇ ಹಲವು ಸಂಸ್ಥೆಗಳ ಚುನಾವಣೋತ್ತರ ಸಮೀಕ್ಷೆಗಳು ಪ್ರಕಟವಾಗಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ