ಬಿಜೆಪಿ ಪರಿವರ್ತನಾ ಯಾತ್ರೆಗೆ ಬಂದವರಿಗೆ ಸೀರೆ, ಕೇಸರಿ ರುಮಾಲು

ಸೋಮವಾರ, 20 ನವೆಂಬರ್ 2017 (15:28 IST)
ಬೆಳಗಾವಿ: ಬಿಜೆಪಿ ಪರಿವರ್ತನಾ ಯಾತ್ರೆಗೆ ಬಂದ ಮಹಿಳೆಯರಿಗೆ ಸೀರೆ ವಿತರಿಸಿದರೆ, ಪುರುಷರಿಗೆ ಕೇಸರಿ ರುಮಾಲು ನೀಡಿದ ಘಟನೆ ವರದಿಯಾಗಿದೆ.
 
ಜಿಲ್ಲೆಯ ಹಿರೇಬಾಗೇವಾಡಿಯಲ್ಲಿ ನಡೆಯಲಿರುವ ಪರಿವರ್ತನಾ ಯಾತ್ರೆಗೆ ಹಿಂದಿನ ದಿನವೇ ಮಹಿಳೆಯರನ್ನು ಆಕರ್ಷಿಸಲು ಬಿಜೆಪಿ ಕಾರ್ಯಕರ್ತರು ಪ್ರತಿಯೊಂದು ಮನೆ ಮನೆಗೆ ತೆರಳಿ ಸೀರೆ, ಕೇಸರಿ ರುಮಾಲು ವಿತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಪರಿವರ್ತನಾ ಯಾತ್ರೆಗೆ ಹೊಸ ಸೀರೆ, ಕೇಸರಿ ರುಮಾಲು ಧರಿಸಿಕೊಂಡು ಬಂದ ಮಹಿಳೆಯರು ಮೋದಿ ನಮಗೆ ಸೀರೆ ಕೊಟ್ಟಿದ್ದಾರೆ ಎಂದರೆ, ಕೆಲವರು ಯಡಿಯೂರಪ್ಪ ನಮಗೆ ಸೀರೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
 
ಪರಿವರ್ತನಾ ಯಾತ್ರೆಗೆ ಜನರು ಸೇರದಿರುವ ಹಿನ್ನೆಲೆಯಲ್ಲಿ ಸೀರೆ, ರುಮಾಲು ಕೊಟ್ಟು ಜನರನ್ನು ಸೆಳೆಯುವ ನಿಟ್ಟಿನಲ್ಲಿ ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ವಿಪಕ್ಷಗಳು ವಾಗ್ದಾಳಿ ನಡೆಸುತ್ತಿವೆ.     

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ