ಸಾಹಿತಿಗಳಿಗೆ ಬೆದರಿಕೆ ಪತ್ರ ವಿಚಾರ ಸಂಬಂಧ ಸಿಸಿಬಿ ಪೊಲೀಸರ ತನಿಖೆ ವೇಳೆ ಮಹತ್ವದ ವಿಚಾರ ಬೆಳಕಿಗೆ ಬಂದಿದೆ. ಒಂದೇ ಹ್ಯಾಂಡ್ ರೈಟಿಂಗ್‌ನಲ್ಲಿ ಬೆದರಿಕೆ ಪತ್ರಗಳು ಬರೆದಿರುವುದು ಬೆಳಕಿಗೆ ಬಂದಿದ್ದು, ಈವರೆಗೂ ಪತ್ರ ಬರೆದವರ ಬಗ್ಗೆ ಮಾಹಿತಿ ಪತ್ತೆಯಾಗಿಲ್ಲ. ಇನ್ನೂ ಹ್ಯಾಂಡ್‌ರೈಟಿಂಗ್ ಒಂದೇ ಆಗಿದ್ದು, ಪತ್ರಗಳು ಬೇರೆ ಬೇರೆ ಪೋಸ್ಟ್ ಆಫೀಸ್‌ನಿಂದ ಸಾಹಿತಿಗಳಿಗೆ ರವಾನೆಯಾಗಿದೆ. ಈಗಾಗಲೇ ಪೋಸ್ಟ್ ಆಫೀಸ್ ಗಳ ಸೀಲು ಪರಿಶೀಲನೆ ನಡೆಸಿದ ಸಿಸಿಬಿ ಅಧಿಕಾರಿಗಳು, ಕೆಲವು ಅನುಮಾನಿತ ವ್ಯಕ್ತಿಗಳ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಇನ್ನು, ಸಾಹಿತಿಗಳಿಗೆ ಬೆದರಿಕೆ ಹಾಕಿದ ಸಂಬಂಧ ಹಲವು ಪೊಲೀಸ್ ಠಾಣೆಗಳಲ್ಲಿ, ವೀರಭದ್ರಪ್ಪ, ಬಿ.ಎಲ್ ವೇಣು , ಬಂಜಗೆರೆ ಜೈಪ್ರಕಾಶ್, ಬಿಟಿ ಲಲಿತಾ ನಾಯಕ್ ಸೇರಿದಂತೆ ಐದು ಜನ ಸಾಹಿತಿಗಳು ದೂರು ದಾಖಲಿಸಿದ್ದಾರೆ. ಸದ್ಯ, ಬಸವೇಶ್ವರನಗರ , ಸಂಜಯನಗರ, ಚಿತ್ರದುರ್ಗ, ಸೇರಿದಂತೆ ಹಲವೆಡೆ ದೂರು ದಾಖಲಾಗಿದ್ದು, ಪ್ರಕರಣದ ತನಿಖೆಯನ್ನ ಸಿಸಿಬಿ ಅಧಿಕಾರಿಗಳು ಚುರುಕುಗೊಳಿಸಿದ್ದಾರೆ.