ಪರಪ್ಪನ ಅಗ್ರಹಾರದಲ್ಲಿ ರಾತ್ರಿ ಕಳೆದ ಚೈತ್ರಾ!

ಭಾನುವಾರ, 24 ಸೆಪ್ಟಂಬರ್ 2023 (21:00 IST)
ಬಿಜೆಪಿ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದ ಮೇಲೆ ಸಿಕ್ಕಿಬಿದ್ದಿರುವ ಚೈತ್ರಾ ಮತ್ತು ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ಹಣ ವಂಚನೆ ಮಾಡಿರುವ ಬಗ್ಗೆ ತಪ್ಪನ್ನು ಒಪ್ಪಿಕೊಂಡಿರುವ ಚೈತ್ರಾ, ಪರಪ್ಪನ ಅಗ್ರಾಹರ ಜೈಲಿನಲ್ಲಿ ಮೊದಲ ದಿನ ಕಳೆದಿದ್ದಾಳೆ. ನಿದ್ದೆ ಇಲ್ಲದೇ ಚಿಂತೆಯಲ್ಲೇ ಕಣ್ಣೀರಾಕುತ್ತಾ ಇಡೀ ರಾತ್ರಿ ಕಳೆದಿರುವ ಚೈತ್ರಾ, ನಿನ್ನೆ ಕೊರ್ಟ್​ನಲ್ಲೂ ಸಹ ಕಣ್ಣೀರಿಟ್ಟಿದ್ದಳು. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಜೈಲು ಪ್ರವೇಶಿಸಿದ್ದ ಚೈತ್ರಾ ಅಂಡ್​ ಗ್ಯಾಂಗ್ ಅನ್ನು ಪರಪ್ಪನ ಅಗ್ರಹಾರ ಜೈಲಿನ ಹೊಸ ಬಂಧಿಖಾನೆಗೆ ಶಿಫ್ಟ್ ಮಾಡಲಾಗಿದೆ. ಚೈತ್ರಾ ಪ್ರತ್ಯೇಕ ಕ್ವಾರಂಟೈನ್ ಸೆಲ್​ನಲ್ಲಿದ್ದು, ನಿನ್ನೆ ರಾತ್ರಿ ಜೈಲು ಸಿಬ್ಬಂದಿ ನೀಡಿದ ಚಪಾತಿ, ಅನ್ನ-ಸಾಂಬರ್ ಅನ್ನು ಚೈತ್ರಾ ಸೇವಿಸಿದ್ದಾರೆ. ಸದ್ಯ, ಇನ್ನು 9 ದಿನ ಹೊಸ ಬಂಧಿಖಾನೆಯಲ್ಲೇ ಚೈತ್ರಾ ಉಳಿಯಲಿದ್ದು, ನೂತನ ಜೈಲಿನಲ್ಲಿ ಹೆಚ್ಚಿನ ಮಹಿಳಾ ಸಿಬ್ಬಂದಿ ಇರದ ಹಿನ್ನೆಲೆಯಲ್ಲಿ ಆರೋಪಿ ಚೈತ್ರಾಳನ್ನು ಪರಪ್ಪನ ಅಗ್ರಹಾರದ ಮುಖ್ಯ ಜೈಲಿಗೆ ಶಿಫ್ಟ್ ಮಾಡುವ ಸಾಧ್ಯತೆ ಇದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ