ಕೆಪಿಟಿಸಿಎಲ್ ಆಕ್ರಮದಲ್ಲಿ ಮೂವರ ಸೆರೆ

ಗುರುವಾರ, 25 ಆಗಸ್ಟ್ 2022 (16:32 IST)
ಕೆಪಿಟಿಸಿಎಲ್‌ ಕಿರಿಯ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮಕ್ಕೆ ಮೂವರನ್ನೂ ಬಂಧಿಸಲಾಗಿದೆ.
 
ಹುಕ್ಕೇರಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾದ ಕಮತನೂರ ನಿವಾಸಿ ಆದೇಶ ಈರಪ್ಪ ನಾಗನೂರಿ (26), ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದ ಮಡಿವಾಳಪ್ಪ ಬಾಳಪ್ಪ ತೋರಣಗಟ್ಟಿ (36), ಇದೇ ತಾಲೂಕಿನ ಹೊಸಕೋಟಿಯ ಶಂಕರ ಕಲ್ಲಪ್ಪ ಉಣಕಲ್‌ (30) ಬಂಧಿತರು.
 
ಇವರೊಂದಿಗೆ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. ಅಭ್ಯರ್ಥಿಗಳೇ ಮಾಹಿತಿ ನೀಡಿದ ಈ ನಾಲ್ವರು ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ.
 
ಬಂಧಿತರಲ್ಲಿ ಆದೇಶ ಎಂಬುವವರು ಹುಕ್ಕೇರಿ ತಾಲ್ಲೂಕಿನ ಶಿರಹಟ್ಟಿ (ಬಿ.ಕೆ) ಗ್ರಾಮದ ತೋಟದ ಮನೆಯಲ್ಲಿ ಕುಳಿತು ಪ್ರಶ್ನೆಪತ್ರಿಕೆಯ ಉತ್ತರಗಳನ್ನು ಹೇಳಿದರು. ಬಾಳಪ್ಪ ಹಾಗೂ
ಶಂಕರ ಇಬ್ಬರೂ ಅಭ್ಯರ್ಥಿಗಳ ಫಲಿತಾಂಶ. ತಮ್ಮತಮ್ಮ ಅಭ್ಯರ್ಥಿಗಳಿಗೆ ಬ್ಲೂಟೂತ್ ಉಪಕರಣಗಳನ್ನು ಖರೀದಿಸಿದ್ದರು. ಈ ಇಬ್ಬರು ಅಭ್ಯರ್ಥಿಗಳಿಗೆ ಉಪಕರಣ ಖರೀದಿಸಿದ್ದರೋ ಅವರು ಸರಿಯಾದ ಸಮಯಕ್ಕೆ ಬಾರದ ಕಾರಣ ಪರೀಕ್ಷೆಗೆ ಹಾಜರಾಗಲಿಲ್ಲ. ಆದರೆ, ಅವರಿಗೆ ನೀಡುವಂತೆ ಬ್ಲೂಟೂತ್ ಉಪಕರಣಗಳಲ್ಲಿ ಪರೀಕ್ಷಾ ಕೇಂದ್ರದ ಹೊರಗಿದ್ದ ಸಿಬ್ಬಂದಿಯೊಬ್ಬರ ಕೈಗೆ ಕೊಟ್ಟು ಬಂದಿದ್ದರು ಎಂದು ವಿಚಾರಣೆ ವೇಳೆ ಗೊತ್ತಾಗಿದೆ.
 
ಹಲವು ವರ್ಷಗಳಿಂದ ಅಕ್ರಮದಲ್ಲಿ ಇನ್ನೂ ಎರಡು ತಂಡಗಳು ಬೆಳಗಾವಿಯಲ್ಲಿ ಒಂದು ತಂಡ
ಉತ್ತರ ಕನ್ನಡ ಜಿಲ್ಲೆಯಲ್ಲಿ ಕ್ರಿಯಾಶೀಲವಾಗಿರುವ ಸುಳಿವು ಸಿಕ್ಕಿದೆ. ಇನ್ನೆರಡು ದಿನಗಳಲ್ಲಿ ಬೆಳಗಾವಿ ತಂಡದ ಆರೋಪಿಗಳನ್ನು ವಿಚಾರಣೆಗೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ