ಸರ್ವೇ ವೇಳೆ ಮೂವರು ಸಿಬ್ಬಂದಿ ಸಾವು: ಕುಟುಂಬಕ್ಕೆ 20ಲಕ್ಷ ಪರಿಹಾರ ಘೋಷಿಸಿದ ಸಿಎಂ

Sampriya

ಮಂಗಳವಾರ, 7 ಅಕ್ಟೋಬರ್ 2025 (16:23 IST)
ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸರ್ವೆ ಮಾಡುವ ವೇಳೆ ಸಾವನ್ನಪ್ಪಿದ ಮೂರು ಸಿಬ್ಬಂದಿ ಕುಟುಂಬಕ್ಕೆ ಸರ್ಕಾರ ₹20ಲಕ್ಷ ಪರಿಹಾರವನ್ನು ಘೋಷಣೆ ಮಾಡಿದೆ. 

ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಈ ನಿರ್ಧಾರವನ್ನು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧಿಕಾರಿಗಳ ಸಭೆಯಲ್ಲಿ ಕೈಗೊಳ್ಳಲಾಯಿತು.

1.20 ಲಕ್ಷ ಶಿಕ್ಷಕರು, ಬೇರೆ 40 ಸಾವಿರ ಸಿಬ್ಬಂದಿ ಗಣತಿಯಲ್ಲಿ ಭಾಗಿಯಾಗಿದ್ದಾರೆ. ಶಿಕ್ಷಕರಿಗೆ ಇತರೆ ಸರ್ವೆಯವರಿಗೆ ₹20 ಸಾವಿರ ಗೌರವ ಧನ ನೀಡಲಾಗುತ್ತದೆ. 

ಪ್ರತಿ ಮನೆಗೆ ₹100 ಕೊಡುತ್ತೇವೆ. ಲಮ್ ಸಮ್ ₹5 ಸಾವಿರ ಕೊಟ್ಟಿದ್ದೇವೆ ಅಲ್ಲಿಗೆ ₹20 ಸಾವಿರ ಆಗುತ್ತೆ. 19ರ ಒಳಗೆ ಪೂರ್ಣ ಪ್ರಮಾಣದಲ್ಲಿ ಸರ್ವೆ ಮುಗಿಯಲಿದೆ ಎಂದು ಸಿಎಂ ಸಭೆಯಲ್ಲಿ ಮಾಹಿತಿ ನೀಡಿದ್ದಾರೆ.

ಸಭೆಯಲ್ಲಿ ಡಿಸಿಎಂ ಡಿ.ಕೆ ಶಿವಕುಮಾರ್, ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂದನ್‌ ಆರ್.‌ ನಾಯಕ್, ಸಿಎಸ್ ಶಾಲಿನಿ ರಜನೀಶ್ ಸೇರಿ ಹಲವರು ಭಾಗಿಯಾಗಿದ್ದರು. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ