ಬೆಂಗಳೂರಲ್ಲಿ ಮೂರು ಹಂತಸ್ಥಿನ ಹಳೆಯ ಕಟ್ಟಡ ಕುಸಿತ

ಶನಿವಾರ, 6 ಆಗಸ್ಟ್ 2022 (14:11 IST)
ಬೆಂಗಳೂರಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಚಿಕ್ಕಪೇಟೆಯಲ್ಲಿ ಮೂರಂತಸ್ತಿನ ಮನೆ ಕುಸಿದಿದೆ.ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
 
ಇನ್ನು ಬೆಳಗಿನ ಜಾವ ಮೂರು ಗಂಟೆಗೆ ಮನೆ ಕುಸಿದಿದೆ.ಗ್ರೌಂಡ್ ಫ್ಲೋರ್ ನಲ್ಲಿ ಮೂರು ಬಟ್ಟೆ ಅಂಗಡಿ ನೆಲಸಮವಾಗಿದೆ.ಅಂಗಡಿ ಮೇಲ್ಬಾಗ ಯಾರು ವಾಸ ಇರ್ಲಿಲ್ಲ.100 ವರ್ಷಕ್ಕೂ ಹಳೆಯ ಕಟ್ಟಡ ಇದ್ದಾಗಿದ್ದು, ಸದ್ಯ ಜೆಸಿಬಿ ಮೂಲಕ ಮನೆ ತೆರವು ಕಾರ್ಯ ಮಾಡಲಾಗ್ತಿದೆ.ಇನ್ನು ಈ ಘಟನೆ ಸಿಟಿ ಮಾರ್ಕೆಟ್ ಠಾಣೆ ವ್ಯಾಪ್ತಿಯಲ್ಲಿ  ನಡೆದಿದೆ.
 
ನಿರಂತರ ‌ಮಳೆಯಿಂದಾಗಿ ಕಟ್ಟಡ ಕುಸಿದಿದೆ.ಈ ಕಟ್ಟಡದಲ್ಲಿ ಫ್ಲಾಸ್ಟಿಕ್ ಮತ್ತು ಗಿಫ್ಟ್   ಸೆಂಟರ್ ಮಾರಟ ಮಾಡುತ್ತಿದ್ದರು.ರಾತ್ರೋ, ರಾತ್ರಿ ಕಟ್ಟಡದ  ದುರಸ್ಥಿಕಾರ್ಯವನ್ನ ಜೆಸಿಬಿ ಮೂಲಕ ಮಾಡಲಾಗಿದೆ.ಸ್ಥಳಕ್ಕೆ ‌ಬಿಬಿಎಂಪಿ ಅಧಿಕಾರಿಗಳು, ದೌಡಯಿಸಿದ್ದು,ನಿರಂತರ ಮಳೆಯಿಂದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಮಾಹಿತಿ ಕಲೆಹಾಕುತ್ತಿದ್ದಾರೆ.
 
ಈ ಮೂರು ಹಂತಸ್ಥಿನ ಕಟ್ಟಡ ಭಂಡಾರಿ ಎಂಬುವರಿಗೆ ಸೇರಿದ್ದು,ನಿರಂತರ ಮಳೆಯಿಂದ ಕಟ್ಟಡಕ್ಕೆ ಹಾನಿಯಾಗಿದೆ ಎಂದು ಮಾಹಿತಿ ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ