ಕೆ.ಎಸ್.ಈಶ್ವರಪ್ಪರನ್ನು ಸದನದಿಂದ ಹೊರಹಾಕಿ ಎಂದ ಸಿಎಂ ಸಿದ್ದರಾಮಯ್ಯ

ಗುರುವಾರ, 14 ಜುಲೈ 2016 (12:21 IST)
ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ಆರೋಪಕ್ಕೆ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಪಕ್ಷ ನಾಯಕ ಈಶ್ವರಪ್ಪ ಅವರನ್ನು ಸದನದಿಂದ ಹೊರ ಹಾಕಿ ಎಂದು ಏರು ಧ್ವನಿಯಲ್ಲಿ ಆಗ್ರಹಿಸಿದರು.
 
ಸದನದಲ್ಲಿ ಪ್ರತಿಪಕ್ಷಗಳ ಆರೋಪಗಳಿಗೆ ಉತ್ತರ ನೀಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಂದಾಗಿದ್ದರು. ಈ ವೇಳೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಆಕ್ಷೇಪ ವ್ಯಕ್ತಪಡಿಸಿದ್ದಕ್ಕೆ ಗರಂ ಆದ ಮುಖ್ಯಮಂತ್ರಿಯವರು ಪ್ರತಿಪಕ್ಷನಾಯಕ ಈಶ್ವರಪ್ಪರನ್ನು ಸದನದಿಂದ ಹೊರಹಾಕಿ ಎಂದು ಏರುಧ್ವನಿಯಲ್ಲಿ ಸೂಚಿಸಿದರು. ಮುಖ್ಯಮಂತ್ರಿ ವರ್ತನೆಯನ್ನು ಖಂಡಿಸಿದ ಈಶ್ವರಪ್ಪ, ಸದನದಿಂದ ನನಗೆ ಹೊರ ಹೋಗಿ ಎಂದು ಹೇಳಲು ನಿವ್ಯಾರು. ಸಭಾಪತಿ ಅವರು ಹೇಳಲಿ ಹೋಗುತ್ತೇನೆ ಎಂದು ತಿರುಗೇಟು ನೀಡಿದರು.
 
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ವಿಪಕ್ಷ ನಾಯಕ ಈಶ್ವರಪ್ಪ ವಾಕ್ಸಮರ ಮುಂದುವರೆದ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಪ್ರತಿಭಟನೆಗೆ ಮುಂದಾದರು. ಸದನದಲ್ಲಿ ಕೆಲ ಕಾಲ ಕೋಲಾಹಲ ಸೃಷ್ಟಿಯಾದ ಹಿನ್ನೆಲೆಯಲ್ಲಿ 20 ನಿಮಿಷಗಳ ಕಾಲ ಕಲಾಪವನ್ನು ಮುಂದೂಡಲಾಯಿತು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ