ತಿವಾರಿ ಪ್ರಕರಣ: ಕೇಂದ್ರದ ತನಿಖೆಗೆ ಸಹಕರಿಸಲು ಸಿದ್ದ ಎಂದ ಸಿಎಂ

ಶುಕ್ರವಾರ, 19 ಮೇ 2017 (13:19 IST)
ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಬಗ್ಗೆ ಕೇಂದ್ರ ಸರಕಾರ ನಡೆಸುವ ಯಾವುದೇ ರೀತಿಯ ತನಿಖೆಗೆ ಸಹಕರಿಸಲು ಸರಕಾರ ಸಿದ್ದವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಲಕ್ನೋದಲ್ಲಿ ಅನುರಾಗ್ ತಿವಾರಿ ಅನುಮನಾಸ್ಪದವಾಗಿ ಸಾವನ್ನಪ್ಪಿದ್ದಾರೆ ಎನ್ನುವ ವರದಿಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಹಗರಣ ಆಗಿದೆ ಎಂದು ಯಾರೋ ಹೇಳಿದ್ದನ್ನು ನಂಬಲು ಸಾಧ್ಯವಿಲ್ಲ. ಆ ಹಗರಣ ಯಾವುದೆಂದು ಕೂಡಾ ಗೊತ್ತಿಲ್ಲ ಎಂದು ತಿಳಿಸಿದ್ದಾರೆ.
 
ಕೇಂದ್ರ ಸರಕಾರಕ್ಕೆ ಒಂದು ವೇಳೆ ತಿವಾರಿ ಸಾವಿನ ಬಗ್ಗೆ ಅನುಮಾನವಿದ್ದಲ್ಲಿ ಯಾವುದೇ ಏಜೆನ್ಸಿಯೊಂದಿಗೆ ತನಿಖೆ ನಡೆಸಲಿ. ರಾಜ್ಯ ಸರಕಾರ ಸಂಪೂರ್ಣ ಸಹಕಾರ ನೀಡುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
 
ಆಹಾರ ಸರಬರಾಜು ಇಲಾಖೆಯಲ್ಲಿ 200 ಕೋಟಿ ರೂಪಾಯಿ ಹಗರಣ ನಡೆದಿದ್ದು, ಹಗರಣವನ್ನು ಬಯಲಿಗೆಳೆಯುವಲ್ಲಿ ನಿರತರಾಗಿದ್ದ ಅನುರಾಗ್ ತಿವಾರಿಯವರಿಗೆ ಹಿರಿಯ ಅಧಿಕಾರಿಗಳು ಸಾಥ್ ನೀಡಿರಲಿಲ್ಲ. ಕಿರುಕುಳ ನೀಡುತ್ತಿದ್ದರು. ಅವರ ಸಾವಿನ ಹಗರಣದ ಹಿಂದಿರುವವರ ಕೈವಾಡವಿದೆ ಎನ್ನುವ ವರದಿಗಳು ಹರಡಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ