ಅನ್ನ ಭಾಗ್ಯ ಬೇಕಿದ್ದರೆ, ಶೌಚಾಲಯವೂ ಬೇಕು!

ಶುಕ್ರವಾರ, 7 ಜುಲೈ 2017 (10:19 IST)
ರೋಣ: ಮನೆಗೊಂದರಂತೆ ಶೌಚಾಲಯವಿರಬೇಕು. ಶೌಚಾಲಯ ಬಳಸಿ ಸ್ವಚ್ಛ ಭಾರತ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಎಂದು ಕೇಂದ್ರ ಸರ್ಕಾರ ಜಾಹೀರಾತು ನೀಡುತ್ತಲೇ ಇದೆ. ಇದೀಗ ಅನ್ನಭಾಗ್ಯ ಬೇಕಿದ್ದರೆ ಶೌಚಾಲಯವೂ ಬೇಕಂತೆ!


ಗ್ರಾಮಗಳಲ್ಲಿ ಶೌಚಾಲಯ ಬಳಕೆ ಬಗ್ಗೆ ಜನರಿಗೆ ಎಷ್ಟೇ ತಿಳುವಳಿಕೆ ಹೇಳಿದರೂ, ಪರಿಸ್ಥಿತಿ ಸುಧಾರಣೆಯಾಗುತ್ತಿಲ್ಲ. ಜನರನ್ನು ಹೇಗೆ ಸರಿದಾರಿಗೆ ತರುವುದು ಎಂದು ತಲೆಕೆಡಿಸಿಕೊಂಡಿದ್ದ ರೋಣ ತಹಶೀಲ್ದಾರ ಈ ನಿಟ್ಟಿನಲ್ಲಿ ಹೊಸ ತಂತ್ರ ರೂಪಿಸಿದ್ದಾರೆ.

ಇಲ್ಲಿನ ಜನರಿಗೆ ಅನ್ನ ಭಾಗ್ಯ ಯೋಜನೆಯಡಿ ಅಕ್ಕಿ ಬೇಕಿದ್ದರೆ, ಮನೆಯಲ್ಲಿ ಶೌಚಾಲಯವಿರಬೇಕು ಎಂದು ತಹಶೀಲ್ದಾರರು ಆದೇಶಿಸಿದ್ದಾರೆ. ಒಂದು ವೇಳೆ ಜುಲೈ 30 ರೊಳಗೆ ಶೌಚಾಲಯ ನಿರ್ಮಿಸದಿದ್ದರೆ ಪಡಿತರ ಚೀಟಿಯನ್ನೇ ರದ್ದುಗೊಳಿಸಲಾಗುವುದು ಎಂದು ಹುಕುಂ ಮಾಡಿದ್ದಾರೆ.

ಹೀಗಾದರೂ ಜನರಿಗೆ ಚುರುಕು ಮುಟ್ಟಲಿ. ಆ ಮೂಲಕ ಎಲ್ಲರೂ ಶೌಚಾಲಯ ಬಳಕೆ ಮಾಡಿ ಆಗಸ್ಟ್ 15 ರ ಸ್ವಾತಂತ್ರ್ಯೋತ್ಸವದ ವೇಳೆಗೆ ಬಯಲು ಮುಕ್ತ ತಾಲೂಕಾಗಿ ಪರಿವರ್ತಿಸಲು ತಹಶೀಲ್ದಾರ ಶಿವಲಿಂಗ ಪ್ರಭು ಪಣ ತೊಟ್ಟಿದ್ದಾರೆ.

ಇದನ್ನೂ ಓದಿ.. ಅರಸಿನ ಹಾಕಿದ ಹಾಲು ಕುಡಿಯುವುದರಿಂದ ಹೀಗೂ ಆಗುತ್ತದೆ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ