ಕೊಹ್ಲಿ ಹೆಸರಿನ ಸ್ಟ್ಯಾಂಡ್ ಅನಾವರಣಕ್ಕೆ ಭರ್ಜರಿ ಪ್ಲ್ಯಾನ್ ಮಾಡಿಕೊಂಡಿರುವ ಡೆಲ್ಲಿ ಕ್ರಿಕೆಟ್ ಸಂಸ್ಥೆ

ಮಂಗಳವಾರ, 10 ಸೆಪ್ಟಂಬರ್ 2019 (09:23 IST)
ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ತವರಿನ ಡೆಲ್ಲಿ ಕ್ರಿಕೆಟ್ ಸಂಸ್ಥೆ ಸೂಕ್ತ ಗೌರವ ನೀಡುವುದಕ್ಕಾಗಿ ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರಿಕೆಟ್ ಮೈದಾನದ ಸ್ಟ್ಯಾಂಡ್ ಒಂದಕ್ಕೆ ಹೆಸರಿಡಲು ನಿರ್ಧರಿಸಿತ್ತು.


ಆ ಹೆಸರಿನ ಅನಾವರಣ ಕೆಲಸವನ್ನು ಭರ್ಜರಿಯಾಗಿಯೇ ನಡೆಸಲು ಡೆಲ್ಲಿ ಕ್ರಿಕೆಟ್ ಸಂಸ್ಥೆ ಪ್ಲ್ಯಾನ್ ಮಾಡಿಕೊಂಡಿದೆ. ಗುರುವಾರದಂದು ಸ್ಟ್ಯಾಂಡ್ ಅನಾವರಣ ಸಮಾರಂಭ ಜವಹರ್ ಲಾಲ್ ನೆಹರೂ ಮೈದಾನದ ವೈಟ್ ಲಿಫ್ಟಿಂಗ್ ಒಳಾಂಗಣದಲ್ಲಿ ನಡೆಯಲಿದೆ.

ಈ ಸಂದರ್ಭದಲ್ಲಿ ಇಡೀ ಟೀಂ ಇಂಡಿಯಾ ಕ್ರಿಕೆಟಿಗರನ್ನು ಡೆಲ್ಲಿ ಕ್ರಿಕೆಟ್ ಸಂಸ್ಥೆ ಆಹ್ವಾನಿಸಿದ್ದು, ಎಲ್ಲಾ ಕ್ರಿಕೆಟಿಗರೂ ಸಮಾರಂಭದಲ್ಲಿ ಹಾಜರರಿರುವ ಸಾಧ್ಯತೆಯಿದೆ. ಇದಾದ ಬಳಿಕ ಟೀಂ ಇಂಡಿಯಾ ದ.ಆಫ್ರಿಕಾ ವಿರುದ್ಧ ಕ್ರಿಕೆಟ್ ಸರಣಿ ಆಡಲು ಧರ್ಮಶಾಲಾಗೆ ತೆರಳಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ