ಇನ್ಮೇಲೆ ಸಿಟಿಯ ರಸ್ತೆಯಲ್ಲಿ ತಂಬಾಕು ಉಗಿಯೋರ್ ಲಾಕ್

ಶನಿವಾರ, 30 ಡಿಸೆಂಬರ್ 2023 (21:10 IST)
ಸಾರ್ವಜನಿಕ ಪ್ರದೇಶದಲ್ಲಿ  ಸ್ಮೋಕಿಂಗ್,ಗುಟ್ಕಾ ಸೇವನೆ ಮಾಡುವವರ ಸಂಖ್ಯೆ ಹೆಚ್ಚಾಗ್ತಿದೆ.ಈ ವಿರುಧ್ಧ ಕ್ರಮ ಕೈಗೊಳ್ಳಲು ಪಾಲಿಕೆಗೆ  ಸಿವಿಲ್ ನ್ಯಾಯಧೀಶ ತರಾಟೆ ತೆಗೆದುಕೊಂಡಿದೆ.

ಪಾಲಿಕೆಗೆ ಕೋಟ್ಪಾ ಕಾಯ್ದೆ ಅನುಷ್ಠಾನ ಮಾಡುವಂತೆ ಸಿವಿಲ್ ನ್ಯಾಯಧೀಶ ರಾಘವೇಂದ್ರ ಶೆಟ್ಟಿಗಾರ್ ರಿಂದ ಪಾಲಿಕೆಗೆ ತರಾಟೆ ತೆಗೆದುಕೊಂಡಿದ್ದು,ಸಿವಿಲ್ ನ್ಯಾಯಧೀಶರಿಂದ ಸೂಚನೆ ಹಿನ್ನೆಲೆ ಪಾಲಿಕೆಯಿಂದ ಜಾಗೃತದಳ ರಚನೆ ಮಾಡಲಾಗಿದೆ.
 
ಇನ್ಮೇಲೆ ಸಿಟಿಯ ರಸ್ತೆಯಲ್ಲಿ ಸ್ಮೋಕಿಂಗ್, ತಂಬಾಕು ಉಗಿಯೋರ್ ಲಾಕ್ ಆದ್ರೆ ,ಕೊಟ್ಪಾ ಕಾಯ್ದೆ ಅಡಿ ಪ್ರಕರಣ ದಾಖಲಾಗುತ್ತೆ.ಈ ಬಗ್ಗೆ ಖಡಕ್ ವಾರ್ನಿಂಗ್ ಹಿರಿಯ ಪೋಲಿಸ್ ಅಧಿಕಾರಿ ಬದ್ರಿನಾಥ್ ಕೊಟ್ಟಿದ್ದಾರೆ.ರಸ್ತೆ ಬದಿಯ ಸಣ್ಣ ಸಣ್ಣ ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದರ ಮೇಲೆ ನಿಗಾವಹಿಸಲಾಗಿದೆ.ಹುಕ್ಕಾಬಾರ್, ಬಾರ್ ಮತ್ತು ರೆಸ್ಟೋರೆಟ್, ತಂಬಾಕು ಉತ್ಪನ್ನ ಮಾರಾಟಗಾರರು ಕಾಯ್ದೆ ಉಲ್ಲಂಘಿಸಿರುವ ವಿರುದ್ಧ ಕ್ರಮ ಜರುಗಿಸಲು ನಿರ್ಧಾರ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ