ಕಾಂಗ್ರೆಸ್ ಸರ್ಕಾರದ ಬಹು ನಿರೀಕ್ಷಿತ ಯೋಜನೆಗಳಲ್ಲಿ ಒಂದಾದಂತಹ ಗೃಹಜೋತಿಗೆ ಈಗಾಗಲೇ ಒಳ್ಳೆ ರೆಸ್ಪಾನ್ ಸಿಕ್ಕಿದ್ದು, ಗೃಹಜ್ಯೋತಿ ಯೋಜನೆಗೆ ನೋಂದಣಿ ಆರಂಭಗೊಂಡ ನಂತ್ರ, ರಾಜ್ಯದಲ್ಲಿ ಈವರೆಗೆ ಇರುವಂತ ಫಲಾನುಭವಿಗಳಲ್ಲಿ ಶೇ.60ರಷ್ಟು ಗ್ರಾಹಕರು ಮಾತ್ರವೇ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇನ್ನೂ ಶೇ.40ರಷ್ಟು ವಿದ್ಯುತ್ ಗ್ರಾಹಕರು ನೋಂದಣಿ ಮಾಡುವುದು ಬಾಕಿ ಉಳಿದಿದೆ ಎನ್ನಲಾಗುತ್ತಿದೆ.
ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಮೊದಲ ತಿಂಗಳಲ್ಲಿ 200 ಯೂನಿಟ್ ಉಚಿತ ವಿದ್ಯುತ್ ಪ್ರಯೋಜನ ಪಡೆಯಲು ಇಂದು ನೋಂದಣಿಗೆ ಕೊನೆಯ ದಿನವಾಗಿದ್ದು, ಇಂದು ಯಾರೆಲ್ಲಾ ಗೃಹ ಜ್ಯೋತಿಗೆ ನೋಂದಣಿ ಮಾಡಿಕೊಂಡಿದ್ದಾರೋ ಅವರಿಗೆಲ್ಲ ಆಗಸ್ಟ್ ತಿಂಗಳಿನಲ್ಲಿ ಶೂನ್ಯ ವಿದ್ಯುತ್ ಬಿಲ್ ಬರಲಿದೆ. ಒಂದು ವೇಳೆ ನೋಂದಾಯಿಸಿಕೊಳ್ಳದಿದ್ದರೇ ಆಗಸ್ಟ್ ನಂತ್ರದ ತಿಂಗಳಿನ ಬಿಲ್ ಶೂನ್ಯ ಬರಲಿದೆ. ಇನ್ನೂ ರಾಜ್ಯದಲ್ಲಿ 1.92 ಕೋಟಿ ಗೃಹ ಬಳಕೆದಾರರಿದ್ದು, ಇವರಲ್ಲಿ ಶೇ.90ಕ್ಕೂ ಅಧಿಕ ಜನರು ಮಾಸಿಕ 200 ಯೂನಿಟ್ ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುತ್ತಿದ್ದಾರಂತೆ. ಇವರಲ್ಲಿ 1.18 ರಿಂದ 1.20 ಕೋಟಿ ಮಂದಿ ಮಾತ್ರವೇ ನೋಂದಣಿ ಮಾಡಿಕೊಂಡಿದ್ದು, ಉಳಿದವರು ಇನ್ನೂ ನೋಂದಣಿ ಮಾಡಿಕೊಳ್ಳಬೇಕಿದೆ.
ಒಟ್ನಲ್ಲಿ ಗೃಹಜ್ಯೋತಿ ಯೋಜನೆಗೆ ಅಂತಿಮ ಗಡುವು ನಿಗದಿ ಪಡಿಸಿಲ್ಲ. ಆಗಸ್ಟ್ ತಿಂಗಳಿನಲ್ಲಿ ಉಚಿತ 200 ಯೂನಿಟ್ ವಿದ್ಯುತ್ ಪ್ರಯೋಜನ ಪಡೆಯಲು ಇಂದು ನೋಂದಣಿ ಮಾಡಿಸಲು ಕೊನೆದಿನವಾಗಿದ್ದು, ಒಂದು ವೇಳೆ ಇಂದು ಅರ್ಜಿ ಸಲ್ಲಿಸದೇ ಇದ್ದರೆ ಸೆಪ್ಟೆಂಬರ್ ನಲ್ಲಿ ಇದರ ಲಾಭ ಪಡಿಯಲು ಅವಕಾಶ ಇದೆ.