ಇಂದು ಆಷಾಢ ಮಾಸದ ಕೊನೆ ಶುಕ್ರವಾರ, ತಾಯಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ

ಶುಕ್ರವಾರ, 14 ಜುಲೈ 2023 (11:16 IST)
ಮೈಸೂರು : ತಾಯಿ ಚಾಮುಂಡೇಶ್ವರಿ ದೇವಸ್ಥಾನದಲ್ಲಿ ಭಕ್ತಸಾಗರ. ಬೆಳಗಿನ ಜಾವ 5 ಗಂಟೆಯಿಂದಲೇ ಜನ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಾರೆ.
 
ಚಾಮುಂಡಿ ತಾಯಿಯ ಸನ್ನಿಧಾನಕ್ಕೆ ಪ್ರತಿದಿನ ಭಕ್ತರು ಬಂದು ಪೂಜೆ ಸಲ್ಲಿಸುತ್ತಾರೆ, ಆದರೆ ಇವತ್ತು ವಿಶೇಷ ದಿನವಾಗಿರುವುದರಿಂದ ಭಕ್ತರ ಸಂಖ್ಯೆ ಅಪರಿಮಿತವಾಗಿದೆ.

ಹೌದು, ಇದು ಆಷಾಢ ಮಾಸದ ಕೊನೆಯ ಶುಕ್ರವಾರವಾಗಿದ್ದು ಭಕ್ತಾದಿಗಳಿಗೆ ವಿಶೇಷ ಪೂಜೆ ಮತ್ತು ಮಹಾಮಂಗಳಾರತಿಯ ಏರ್ಪಾಟು ಮಾಡಲಾಗಿದೆ. ಜನರನ್ನು ನಿಯಂತ್ರಿಸಲು ಪೊಲೀಸರು ಮತ್ತು ಮಹಿಳಾ ಪೊಲೀಸರು ಸಾಹಸ ಪಡುತ್ತಿದ್ದಾರೆ.

ನೂಕುನುಗ್ಗಲನ್ನು ಹತೋಟಿಯಲ್ಲಿಡಲು ದೇವಸ್ಥಾನದ ವ್ಯವಸ್ಥಾಪಕ ಮಂಡಳಿ ದರ್ಶನಕ್ಕೆ ರೂ. 300 ಹಾಗೂ ರೂ. 50 ನಿಗದಿಪಡಿಸಿ ವಿಶೇಷ ವ್ಯವಸ್ಥೆಯನ್ನೂ ಕಲ್ಪಿಸಿದೆ. 65 ವರ್ಷಕ್ಕೂ ಮೇಲ್ಪಟ್ಟ ಹಿರಿಯ ನಾಗರಿಕರು ರೂ.50 ಟಿಕೆಟ್ ಖರೀದಿಸಿ ಚಾಮುಂಡೇಶ್ವರಿಯ ದರ್ಶನ ಪಡೆದುಕೊಳ್ಳಬಹುದಾಗಿದೆ.

ವೆಬ್ದುನಿಯಾವನ್ನು ಓದಿ