ಇಂದು ವರ್ಷದ ಮೂರನೇ ಚಂದ್ರ ಗ್ರಹಣ

ಭಾನುವಾರ, 5 ಜುಲೈ 2020 (10:05 IST)
ಬೆಂಗಳೂರು : ಗುರು ಪೌರ್ಣಿಮೆ ದಿನವಾದ ಇಂದು ಈ ವರ್ಷದ ಮೂರನೇ ಚಂದ್ರ ಗ್ರಹಣ ಸಂಭವಿಸಿದೆ.

ಚಂದ್ರ ಗ್ರಹಣ ಇಂದು ಬೆಳಿಗ್ಗೆ 8.37ಕ್ಕೆ ಆರಂಭವಾಗಿದ್ದು, ಬೆಳಿಗ್ಗೆ 9.59ಕ್ಕೆ ಪೂರ್ಣ ಗೋಚರವಾಗಲಿದೆ. ಬೆಳಿಗ್ಗೆ 11.37ಕ್ಕೆ ಗ್ರಹಣ ಮೋಕ್ಷವಾಗಲಿದೆ. ಒಟ್ಟು 2 ಗಂಟೆ 45 ನಿಮಿಷಗಳ ಕಾಲ ಚಂದ್ರ ಗ್ರಹಣ ಸಂಭವಿಸಲಿದೆ.

ಈ ಚಂದ್ರ ಗ್ರಹಣ ಆಫ್ರಿಕಾ, ಉತ್ತರ ಅಮೇರಿಕಾ, ಫೆಸಿಫಿಕ್, ಅಟ್ಲಾಂಟಿಕ್, ಅಂಟಾರ್ಟಿಕಾದಲ್ಲಿ ಹೆಚ್ಚು ಗೋಚರವಾಗಲಿದ್ದು, ಭಾರತದಲ್ಲಿ ಈ ಚಂದ್ರ ಗ್ರಹಣ ಗೋಚರವಾಗಲ್ಲ ಎನ್ನಲಾಗಿದೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ