ಜ್ಯೂಸ್ ಗೆ ಮತ್ತು ಬರುವ ಔಷಧ ಮಿಕ್ಸ್ ಮಾಡಿ ನಟಿಯ ಮೇಲೆ ಅತ್ಯಾಚಾರ ಎಸಗಿದ ಸ್ನೇಹಿತ

ಭಾನುವಾರ, 5 ಜುಲೈ 2020 (10:02 IST)
Normal 0 false false false EN-US X-NONE X-NONE

ಬೆಂಗಳೂರು : ಹುಟ್ಟುಹಬ್ಬದಂದು ಜ್ಯೂಸ್ ಗೆ ಮತ್ತು ಬರುವ ಔಷಧ ಮಿಕ್ಸ್ ಮಾಡಿ ಸ್ಯಾಂಡಲ್ ವುಡ್ ನಟಿಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
 

ಮೋಹಿತ್ ಇಂತಹ ಕೃತ್ಯ ಎಸಗಿದ ಆರೋಪಿ ಎನ್ನಲಾಗಿದೆ. ಖಾಸಗಿ ಕಂಪೆನಿಯಲ್ಲಿ ಸಿಇಒ ಆಗಿರುವ ಈತ ನಟಿಗೆ ತನ್ನ ಕಂಪೆನಿಯ ಬ್ರಾಂಡ್ ಅಂಬಾಸಿಡರ್ ಮಾಡುವುದಾಗಿ ಹೇಳಿ ಪರಿಚಯ ಮಾಡಿಕೊಂಡು ಬಳಿಕ ನಟಿಯ ಹುಟ್ಟುಹಬ್ಬವನ್ನು ತನ್ನ ಮನೆಯಲ್ಲೇ ಆಚರಿಸುವ ನೆಪದಲ್ಲಿ ಜ್ಯೂಸ್ ಗೆ ಮತ್ತು ಬರುವ ಔಷಧ ಮಿಕ್ಸ್ ಮಾಡಿ ಸೆಕ್ಸ್ ಮಾಡಿದ್ದಾನೆ. ಅಷ್ಟೇ ಅಲ್ಲದೇ ಸೆಕ್ಸ್ ಮಾಡಿದ್ದನ್ನು ವಿಡಿಯೋ ಮಾಡಿ ಬೆದರಿಕೆ ಹಾಕಿ ಹಣ ವಸೂಲಿ ಮಾಡಿದ್ದಾನೆ ಎಂದು ನಟಿ ಆರೋಪಿಸಿದ್ದಾಳೆ.

ಈ ಬಗ್ಗೆ ನಟಿ ಜೆ.ಜೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ