ಇಂದು ಚಂದ್ರನ ಕಕ್ಷೆ ಸೇರಲಿರುವ ನೌಕೆ

ಶನಿವಾರ, 5 ಆಗಸ್ಟ್ 2023 (15:00 IST)
ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ನೌಕೆ ಈಗಾಗಲೇ ತನ್ನ ನಿಗದಿತ ಪ್ರಯಾಣದಲ್ಲಿ ಮೂರನೇ ಎರಡಷ್ಟು ಹಾದಿ ಕ್ರಮಿಸಿದ್ದು, ಶನಿವಾರ ಸಂಜೆ ಚಂದ್ರನ ಕಕ್ಷೆಗೆ ಸೇರ್ಪಡೆಯಾಗಲಿದೆ. ಆಗಸ್ಟ್​​​ 1ರಂದು ಭೂಮಿಯ ಕಕ್ಷೆಯಿಂದ ಹೊರಕ್ಕೆ ಜಿಗಿದು ಚಂದ್ರನತ್ತ ಪ್ರಯಾಣ ಆರಂಭಿಸಿದ್ದ ಚಂದ್ರಯಾನ ನೌಕೆ, ಇದೀಗ ಚಂದ್ರನ ಕಕ್ಷೆಯನ್ನು ಸೇರಲು ಕ್ಷಣಗಣನೆ ಆರಂಭವಾಗಿದೆ. ಜುಲೈ14ರಂದು ಶ್ರೀಹರಿಕೋಟಾದಿಂದ ನಭಕ್ಕೆ ನೆಗೆದಿದ್ದ ಚಂದ್ರಯಾನ-3 ನೌಕೆಯನ್ನು ಚಂದ್ರನ ಕಕ್ಷೆಗೆ ಸೇರಿಸುವ ‘ಲೂನಾರ್‌ ಆರ್ಬಿಟ್‌ ಇಂಜೆಕ್ಷನ್‌ ’ ಪ್ರಕ್ರಿಯೆಗೆ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಆ.5ರ ಸಂಜೆ 7 ಗಂಟೆಯ ಮುಹೂರ್ತ ನಿಗದಿಪಡಿಸಿದೆ. ‘ಚಂದ್ರನ ಕಕ್ಷೆಗೆ ಅತ್ಯಂತ ಸನಿಹದಲ್ಲಿ ನೌಕೆ ಇರುವ ಕ್ಷಣ ನೋಡಿಕೊಂಡು ಲೂನಾರ್‌ ಆರ್ಬಿಟ್‌ ಇಂಜೆಕ್ಷನ್‌ ಕೈಗೊಳ್ಳಲಾಗುತ್ತದೆ ಎಂದು ಇಸ್ರೋ ತಿಳಿಸಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ