ಅಕ್ರಮ ಸಂಬಂಧ ಶಂಕೆ, ಪತ್ನಿಯನ್ನ ಕೊಂದು ಅತ್ತೆಗೆ ಕರೆ ಮಾಡಿದ ಪತಿ?

ಗುರುವಾರ, 27 ಜುಲೈ 2023 (12:56 IST)
ಬೆಂಗಳೂರು : ಅಕ್ರಮ ಸಂಬಂಧ ಶಂಕೆ ಹಿನ್ನಲೆ ಪತಿಯೇ ಪತ್ನಿಯನ್ನ ಬರ್ಬರವಾಗಿ ಹತ್ಯೆಗೈದು ಅತ್ತೆಗೆ ಕರೆ ಮಾಡಿದ ಘಟನೆ ಮೂಡಲಪಾಳ್ಯದ ಶಿವಾನಂದನಗರದಲ್ಲಿ ನಡೆದಿದೆ.
 
ಗೀತಾ (33) ಕೊಲೆಯಾದ ಮಹಿಳೆ. ಆರೋಪಿ ಪತಿ ಶಂಕರ್ ಹಾಗೂ ಮೃತ ಪತ್ನಿ ಗೀತಾ 13 ವರ್ಷಗಳ ಹಿಂದೆ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಮಕ್ಕಳ ಕೂಡ ಇದ್ದಾರೆ. ಇನ್ನು ನಿನ್ನೆ(ಜು.26) ರಾತ್ರಿ ಮನೆಯಲ್ಲಿ ಪತ್ನಿಯನ್ನು ಕೊಲೆ ಮಾಡಿರುವ ಶಂಕರ್. ಬಳಿಕ ಗೀತಾ ತಾಯಿಗೆ ಕರೆ ಮಾಡಿ, ನಿಮ್ಮ ಮಗಳನ್ನ ಕೊಲೆ ಮಾಡಿರುವುದಾಗಿ ಹೇಳಿದ್ದ.

ಇನ್ನು ಹೊಸೂರಿನ ಮನೆಯಲ್ಲಿದ್ದ ಗೀತಾ ತಾಯಿ ವಿಚಾರ ತಿಳಿಯುತ್ತಿದ್ದಂತೆ ಮನೆಗೆ ಓಡೋಡಿ ಬಂದಿದ್ದಾರೆ. ಮನೆ ಬಾಗಿಲು ತಗೆದು ನೋಡಿದಾಗ ಮಗಳ ಶವ ಪತ್ತೆಯಾಗಿದೆ.

ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನದಿಂದ ಪತ್ನಿಯನ್ನ ಹತ್ಯೆಗೈದು, ಸೋಫಾ ಸೆಟ್ ಮೇಲೆ ಶವವನ್ನ ತಂದಿಟ್ಟಿದ್ದಾನೆ. ಇದೀಗ ಕೊಲೆ ಆರೋಪಿ ಶಂಕರ್ನನ್ನು ಚಂದ್ರಾಲೇಔಟ್ ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ