ಇಂದು, ನಾಳೆ ನಿಗಮ ಮಂಡಳಿಗಳ ನೇಮಕಾತಿ ಪರೀಕ್ಷೆ ನಡೆಯಲಿದೆ,ಪರೀಕ್ಷಾ ಅಕ್ರಮಗಳಿಂದ ಎಚ್ಚೆತ್ತುಕೊಂಡ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ನಕಲು ತಡೆಯಲು ಪರೀಕ್ಷೆಯಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಎಲ್ಲ ಪರೀಕ್ಷಾ ಕೇಂದ್ರಗಳ ಬಳಿತಪಾಸಣೆಗೆ ಪೊಲೀಸರ ಸರ್ಪಗಾವಲು ಹಾಕಲಾಗಿದ್ದು, ಮೆಟಲ್ ಡಿಟೆಕ್ಟರ್ ಬಳಕಸಲಾಗುತ್ತಿದೆ.
ಈ ಪರೀಕ್ಷೆಯಲ್ಲಿ ಹಿಜಾಬ್ ನಿಷೇಧಿಸಲಾಗಿದೆ. ಅಭ್ಯರ್ಥಿಗಳು ತಲೆಯ ಮೇಲೆ ಬಟ್ಟೆ, ಟೋಪಿ, ಮುಖಕ್ಕೆ ಮಾಸ್ಕ್ ಧರಿಸುವಂತಿಲ್ಲ, ಪೂರ್ತಿ ತೋಳಿನ ಅಂಗಿ ಧರಿಸುವಂತಿಲ್ಲ ಎಂದು ಅಭ್ಯರ್ಥಿಗಳಿಗೆ ಸೂಚನೆ ನೀಡಲಾಗಿದೆ. ಆದರೆ, ಈ ಬಾರಿ ಮಹಿಳಾ ಅಭ್ಯರ್ಥಿಗಳಿಗೆ ಮಾಂಗಲ್ಯ ಮತ್ತ ಕಾಲುಂಗರ ಧರಿಸಲು ಅವಕಾಶ ನೀಡಲಾಗಿದೆ. ಕಳೆದ ಬಾರಿ ಎಫ್ ಡಿಎ ಪರೀಕ್ಷೆಯ ವೇಳೆಯಲ್ಲಿ ಕೆಲವು ಕೇಂದ್ರಗಳಲ್ಲಿ ಮಹಿಳಾ ಅಭ್ಯರ್ಥಿಗಳ ಮಾಂಗಲ್ಯ ಮತ್ತು ಕಾಲುಂಗರ ತೆಗೆಸಿದ್ದು ವಿವಾದಕ್ಕೆ ಕಾರಣವಾಗಿತ್ತು.