ಟೊಮೆಟೊ ಕೆಚಪ್, ಬೆಲ್ಲದಲ್ಲೂ ರಾಸಾಯನಿಕ ಪತ್ತೆ: ಇಲ್ಲಿದೆ ವಿವರ

Krishnaveni K

ಮಂಗಳವಾರ, 4 ಮಾರ್ಚ್ 2025 (12:38 IST)
ಬೆಂಗಳೂರು: ಇಡ್ಲಿ, ಬಟಾಣಿ ಬಳಿಕ ಈಗ ಚಪ್ಪರಿಸಿಕೊಂಡು ಸೇವಿಸುವ ಟೊಮೆಟೊ ಕೆಚಪ್, ಬೆಲ್ಲದಲ್ಲೂ ಅಪಾಯಕಾರೀ ರಾಸಾಯನಿಕವಿರುವುದು ಪತ್ತೆಯಾಗಿದೆ. ಇದರ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ ನೋಡಿ.

ಆಹಾರ ಗುಣಮಟ್ಟ ಮತ್ತು ಸುರಕ್ಷತಾ ವಿಭಾಗ ಈಗ ಹಲವು ಆಹಾರ ವಸ್ತುಗಳ ಸ್ಯಾಂಪಲ್ ಪರೀಕ್ಷಿಸಿ ಗುಣಮಟ್ಟದ ವಿವರ ಬಹಿರಂಗಗೊಳಿಸುತ್ತಿದೆ. ಅದರಂತೆ ಈಗಾಗಲೇ ಇಡ್ಲಿ ತಯಾರಿಕೆಗೆ ಪ್ಲಾಸ್ಟಿಕ್ ಕವರ್ ಬಳಸುವುದರಿಂದ ಕ್ಯಾನ್ಸರ್ ಕಾರಕ ಅಂಶ ಹೊರಸೂಸುತ್ತದೆ ಎನ್ನುವುದು ಪತ್ತೆಯಾಗಿತ್ತು. ಹಸಿರು ಬಟಾಣಿಗೆ ಹಾಕುವ ಕೃತಕ ಬಣ್ಣಗಳಿಂದಲೂ ಆರೋಗ್ಯ ಸಮಸ್ಯೆಯಾಗುತ್ತದೆ ಎನ್ನುವುದು ಪತ್ತೆಯಾಗಿತ್ತು.

ಇದೀಗ ಟೊಮೆಟೊ ಕೆಚಪ್ ಮತ್ತು ಬೆಲ್ಲದಲ್ಲೂ ಕೃತಕ ಬಣ್ಣ, ರಾಸಾಯನಿಕ ಪತ್ತೆಯಾಗಿದೆ. ಟೊಮೆಟೊ ಕೆಚಪ್ ಕೆಂಪಗೆ ಕಾಣಲು ಕೃತಕ ಬಣ್ಣ ಬಳಸಲಾಗುತ್ತಿದ್ದು, ಇದು ಅಪಾಯಕಾರೀ ಸಮಸ್ಯೆ ತಂದೊಡ್ಡಬಲ್ಲದು ಎಂದು ತಿಳಿದುಬಂದಿದೆ. ಟೊಮೆಟೊ ಕೆಚಪ್ ನಲ್ಲಿ ಸೋಡಿಯಂ ಬೆಂಜೊಯೆಟ್ ಎಂಬ ರಾಸಾಯನಿಕ ಮಿಕ್ಸ್ ಮಾಡಲಾಗುತ್ತಿದೆ.

ಅದೇ ರೀತಿ ಬೆಲ್ಲದಲ್ಲೂ ರಾಸಾಯನಿಕ ಬಳಕೆಯಾಗುತ್ತಿದೆ ಎಂದು ತಿಳಿದುಬಂದಿದೆ. ಬೆಲ್ಲದಲ್ಲಿ ಅಪಾಯಕಾರೀ ಸಲ್ಫರ್ ಡೈ ಆಕ್ಸೈಡ್ ಮತ್ತು ಕೃತಕ ಬಣ್ಣ ಮಿಕ್ಸ್ ಮಾಡಲಾಗುತ್ತಿದೆ ಎಂಬ ಅಂಶ ಬೆಳಕಿಗೆ ಬಂದಿದೆ. ಇದು ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಬಹುದಾಗಿದೆ ಎಂದು ತಿಳಿದುಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ