ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವವರಿಗೆ ದಯಾಮರಣ ಹಕ್ಕು ನೀಡಿ ಮಹತ್ವದ ಆದೇಶ
ಮಾರಣಾಂತಿಕ ರೋಗಗಳಿಂದ ಬಳಲುತ್ತಿದ್ದು ಜೀವನಪೂರ್ತಿ ಚೇತರಿಕೆಗೆ ಅವಕಾಶವೇ ಇಲ್ಲದ ರೋಗಿಗಳಿಗೆ ದಯಾಮರಣ ಹೊಂದಲು ಅವಕಾಶ ಕಲ್ಪಿಸಲಾಗಿದೆ. ದಯಾಮರಣಕ್ಕೆ ಒಪ್ಪಿಗೆ ನೀಡಲು ಇಬ್ಬರು ವೈದ್ಯರನ್ನೊಳಗೊಂಡ ಸಮಿತಿಯನ್ನು ನಿಯೋಜಿಸಲಾಗುತ್ತದೆ.
ಈ ಮೂಲಕ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ನಿರ್ದೇಶನವನ್ನು ಪಾಲಿಸಿದೆ. ಇತ್ತೀಚೆಗಿನ ದಿನಗಳಲ್ಲಿ ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವವರು ದಯಾ ಮರಣಕ್ಕೆ ಮನವಿ ಸಲ್ಲಿಸುತ್ತಿರುವ ಸಂಖ್ಯೆ ಹೆಚ್ಚಾಗಿರುವ ಕಾರಣಕ್ಕೆ ಈ ಮಹತ್ವದ ಆದೇಶ ಹೊರಡಿಸಲಾಗಿದೆ.
ಮೊದಲು ರೋಗಿಯ ಕುಟುಂಬಸ್ಥರು ಮನವಿ ಮಾಡಬೇಕಾಗುತ್ತದೆ. ಇದನ್ನು ಪ್ರೈಮರಿ ಬೋರ್ಡ್ ಪರಿಶೀಲನೆ ನಡೆಸುತ್ತದೆ. ನಂತರ ಸೆಕೆಂಡರಿ ಬೋರ್ಡ್ ಗೆ ಮನವಿಯನ್ನು ಹಸ್ತಾಂತರಿಸುತ್ತದೆ. ಎಲ್ಲಾ ವರದಿಗಳನ್ನು ಪರಿಶೀಲಿಸಿ ಈ ಬೋರ್ಡ್ ಕೋರ್ಟ್ ಗೆ ಮನವಿ ಸಲ್ಲಿಸುತ್ತದೆ. ಕೋರ್ಟ್ ಅನುಮತಿ ನೀಡಿದರೆ ರೋಗಿಯ ಜೀವ ರಕ್ಷಕವನ್ನು ತೆಗೆಯಲು ಅವಕಾಶ ನೀಡಲಾಗುತ್ತದೆ.